ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ ನಂದಕಿಶೋರ್ ನಿರ್ದೇಶನದ ‘ಟೈಗರ್’ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

Tiger--001

ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ತೆರೆ ಮೇಲೆ ಬರುತ್ತಿದೆ ಟೈಗರ್. ದಶಕಗಳ ಹಿಂದೆ ಪ್ರಭಾಕರ್ ಅಭಿನಯದಲ್ಲಿ ಮೂಡಿಬಂದಿದ್ದ ಟೈಗರ್ ಚಲನಚಿತ್ರ ಆಗ ದೊಡ್ಡ ಹೆಸರು ಮಾಡಿತ್ತು. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೊಂದು ಟೈಗರ್ ಬರುತ್ತಿದೆ. ರಂಗನ್ ಸ್ಟೈಲ್ ಖ್ಯಾತಿಯ ಪ್ರದೀಪ್ ನಾಯಕನಾಗಿ ಕಾಣಿಸಿಕೊಂಡಿರುವ ಟೈಗರ್ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಂದಕಿಶೋರ್ ಈ ಚಿತ್ರಕ್ಕೆ ಆ್ಯಕ್ಷನ್‍ಕಟ್ ಹೇಳಿದ್ದಾರೆ.  ಇಂಚರ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ಶ್ರೀಮತಿ ಚಿಕ್ಕಬೋರಮ್ಮರವರ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ನಟ-ನಿರ್ಮಾಪಕ ಕೆ.ಶಿವರಾಂ ಬೆನ್ನೆಲುಬಾಗಿ ನಿಂತು ಅಳಿಯ ಪ್ರದೀಪ್‍ಗಾಗಿ ಈ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಜತೆಗೆ ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಖುಷಿಯಲ್ಲಿದ್ದ ನಾಯಕ ನಟ ಪ್ರದೀಪ್ ಮಾತನಾಡಿ, ಈ ಚಿತ್ರ ನನ್ನ ಸಿನಿಮಾ ಬದುಕಿಗೆ ಒಂದು ಹೊಸ ತಿರುವನ್ನು ಖಂಡಿತ ನೀಡುತ್ತದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿರುವ ತರುಣ್ ಸುಧೀರ್ ಹಾಗೂ ನಿರ್ದೇಶಕ ನಂದಕಿಶೋರ್ ಇವರಿಬ್ಬರೂ ತುಂಬಾ ಶ್ರಮ ವಹಿಸಿ ಹಗಲಿರುಳೆನ್ನದೆ ದುಡಿದು ಚಿತ್ರವನ್ನು ತೆರೆಮೇಲೆ ಮೂಡಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದ ಮೋಡಿ ಹಾಗೂ ಯೋಗಾನಂದ್ ಮುದ್ದಾನ್ ಅವರ ಸಂಭಾಷಣೆಗಳು ನನಗೆ ಹೊಸ ಇಮೇಜನ್ನೇ ತಂದುಕೊಟ್ಟಿವೆ ಎಂದು ಹೇಳಿದರು.

ಟೈಗರ್ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಟೈಗರ್ ಟೈಗರ್ ಎಂಬ ಹಾಡು ಅದ್ಭುತವಾಗಿ ಮೂಡಿಬಂದಿದೆ. ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಗಣೇಶ್ ಮತ್ತು ರವಿವರ್ಮ ಈ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಸುಧಾಕರ್ ಅವರ ಛಾಯಾಗ್ರಹಣ ವಿದೆ. ನಾಗೇಂದ್ರ ಪ್ರಸಾದ್, ಯೋಗರಾಜ ಭಟ್, ಲೋಕೇಶ್ ಕೃಷ್ಣ ಗೀತೆಗಳನ್ನು ಬರೆದಿದ್ದು, ಸೋನು ನಿಗಂ ಹಾಡಿರುವ ಬೆಳದಿಂಗಳ ರಾತ್ರಿಯಲ್ಲಿ ಎಂಬ ಹಾಡು ಈಗಾಗಲೇ ಕೇಳುಗರ ಮನವನ್ನು ಗೆದ್ದಿದೆ. ಈ ಚಿತ್ರದಲ್ಲಿ ಬಾಲಿವುಡ್‍ನ ಖ್ಯಾತ ನಟ ಓಂಪುರಿಯವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದರೆ, ಚಿತ್ರದ
ನಾಯಕಿಯಾಗಿ ನೈರಾ ಬ್ಯಾನರ್ಜಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿಶಂಕರ್ ಅಭಿನಯಿಸಿದ್ದು ಈ ಚಿತ್ರವನ್ನು ಮೈಸೂರು ಟಾಕೀಸ್‍ನ ಜಾಕ್ ಮಂಜು ಅವರು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿ ಸುತ್ತಿದ್ದಾರೆ. ಅದ್ಧೂರಿ ಪ್ರಚಾರದೊಂದಿಗೆ ಟೈಗರ್ ತೆರೆ ಮೇಲೆ ಘರ್ಜಿಸಲು  ಸನ್ನದ್ಧವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin