ನಾಳೆಯಿಂದ ರಾಜ್ಯಾದ್ಯಂತ ‘ಪಟಾಕಿ’ ಸೌಂಡ್

ಈ ಸುದ್ದಿಯನ್ನು ಶೇರ್ ಮಾಡಿ

Pataki--01

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷೆಯ ಚಿತ್ರ ಪಟಾಕಿ. ರಾಜ್ಯಾದ್ಯಂತ ಅದ್ಧೂರಿಯಾಗಿ ಬೆಳ್ಳಿ ಪರದೆಯನ್ನು ಪ್ರವೇಶಿಸಲಿದೆ . ಎಸ್.ವಿ. ಪ್ರೋಡಕ್ಷನ್ಸ್ ಬ್ಯಾನರ್ ಮೂಲಕ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸುತ್ತಲೇ ಬಂದಿರುವ ಸದಭಿರುಚಿಯ ನಿರ್ಮಾಪಕ ಎಸ್.ವಿ.ಬಾಬು ಗೋಲ್ಡನ್‍ಸ್ಟಾರ್ ಗಣೇಶ್ ಜೊತೆ ಎರಡನೇ ಬಾರಿಗೆ ಸಿನಿಮಾ ಮಾಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಭರ್ಜರಿ ಪಟಾಕಿ ಹೊಡೆಯಲು ಸಿದ್ದರಾಗಿದ್ದಾರೆ.  ನಿರ್ದೇಶಕ ಮಂಜು ಸ್ವರಾಜ್ ಅವರ ಸಾರಥ್ಯದಲ್ಲಿ ತಯಾರಾಗಿರುವ ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ಪಟಾಸ್ ಚಿತ್ರದ ರೀಮೇಕ್. ಎಸ್.ವಿ. ಪ್ರೋಡಕ್ಷನ್ ಮೂಲಕ ಹೊರಬರುತ್ತಿರುವ ಪಟಾಕಿ ಚಿತ್ರದಲ್ಲಿ ಗೋಲ್ಡನ್‍ಸ್ಟಾರ್  ಗಣೇಶ್ ಹಾಗೂ ರನ್ಯ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.


 

ಎಸ್.ವಿ.ಬಾಬು ಹಾಗೂ ಗಣೇಶ್ ಕಾಂಬಿನೇಷನ್‍ನಲ್ಲಿ ಈ ಹಿಂದೆ ಸಂಗಮ ಚಿತ್ರ ತೆರೆಕಂಡಿತ್ತು. ಶಿಶಿರ, ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠದಂಥ ಅಪ್ಪಟ ಸ್ವಮೇಕ್ ಚಿತ್ರಗಳನ್ನು ನಿರ್ದೇಶಿಸಿದ ಮಂಜು ಸ್ವರಾಜ್ ಮೊದಲ ಬಾರಿಗೆ ರೀಮೇಕ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.  ಬಹುನಿರೀಕ್ಷಿತ ಚಿತ್ರ ಪಟಾಕಿ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಲಿದೆ. ಈ ಚಿತ್ರದಲ್ಲಿ ನಾಯಕ ಗಣೇಶ್ ಅವರ ತಂದೆಯಾಗಿ ಡೈಲಾಗ್‍ಕಿಂಗ್ ಸಾಯಿಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಗಣೇಶ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಪಟಾಕಿ ಚಿತ್ರದ ಹಾಡುಗಳು ಕೇಳುಗರ ಮನಸೂರೆಗೊಂಡಿದ್ದು, ಅರ್ಜುನ್ ಜನ್ಯರವರ ಸಂಗೀತ ಮೋಡಿ ಲಕ್ಷಾಂತರ ಹಿಟ್ಸ್ ಪಡೆದುಕೊಂಡಿವೆ. ಬಹಳ ದಿನಗಳ ನಂತರ ಗಣೇಶ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಅದೇ ರೀತಿ ಇಡೀ ಚಿತ್ರತಂಡ ಚಿತ್ರವನ್ನು ಅದ್ಧೂರಿ ಪ್ರಚಾರ ದೊಂದಿ ಗೆ ತೆರೆ ಮೇಲೆ ತರುತ್ತಿದ್ದು, ಇದೊಂದು ಸಂಪೂರ್ಣ ಮನೋ ರಂಜ ನಾ ಚಿತ್ರ ವಾಗಿ ಪ್ರೇಕ್ಷ ಕರನ್ನು ಸೆಳೆಯಲಿದೆ ಎಂಬ ಭರವಸೆಯನ್ನು ಇಡೀ ತಂಡ ಹೊಂದಿದ್ದು, ನಿರ್ಮಾಪಕರಾದಂತಹ ಎಸ್.ವಿ. ಬಾಬು ರವರು ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಚಿತ್ರವನ್ನು ಸಿದ್ಧಪಡಿಸಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಇನ್ನೇನಿದ್ದರೂ ಪ್ರೇಕ್ಷಕ ಮಹಾಪ್ರಭುಗಳು ಚಿತ್ರ ವೀಕ್ಷಿಸಿ ಪಟಾಕಿ ಸದ್ದು ಯಾವ ರೀತಿ ಇದೆ ಎಂಬುದನ್ನು ತಿಳಿಸಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Pataki--01

Facebook Comments

Sri Raghav

Admin