ನಾಳೆ ರಾಮಾನುಜಾಚಾರ್ಯರ ವಿಗ್ರಹ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

pandavapura

ಪಾಂಡವಪುರ, ಏ.24-ಆಚಾರ್ಯ ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಪ್ರಯುಕ್ತ ತಾಲೂಕಿನ ಕೆರೆತೊಣ್ಣೂರಿನಲ್ಲಿ ನಿರ್ಮಿಸಿರುವ 36 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ವಿಗ್ರಹವನ್ನು (ಏ.25)ನಾಳೆ ಅನಾವರಣಗೊಳಿಸಲಾಗುತ್ತಿದೆ.ಪ್ರಸಿದ್ಧ ತೊಣ್ಣೂರು ಕೆರೆಯ (ಶ್ರೀರಾಮಾನುಜ ಸರೋವರ) ಸಮೀಪದ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಾನುಜಾಚಾರ್ಯರ 36 ಅಡಿ ಎತ್ತರದ ಬೃಹತ್ ವಿಗ್ರಹ ಅನಾವರಣಕ್ಕಾಗಿ ಸಿದ್ದಗೊಂಡಿದೆ. ಶ್ರೀವೈಕುಂಠ ಗೌರವದಾಸ ಅವರು ಈ ಬೃಹತ್ ಪ್ರತಿಮೆ ಯೋಜನೆಯ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಹೊತ್ತಿದ್ದರು. ಸಿಮೆಂಟ್ ಹಾಗೂ ಕಬ್ಬಿಣವನ್ನು ಬಳಕೆ ಮಾಡಿ ಕಳೆದ ಎರಡು ತಿಂಗಳಿನಿಂದ ಪ್ರತಿಮೆ ನಿರ್ಮಾಣ ಕಾರ್ಯ ನಡೆದಿತ್ತು.

ನಾಳೆ ಬೆಳಗ್ಗೆ 11ಕ್ಕೆ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದ್ದು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಸಿ.ಎಸ್.ಪುಟ್ಟರಾಜು ಪ್ರತಿಮೆಯ ಶಿಲಾ ಫಲಕ ಅನಾವರಣಗೊಳಿಸಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಎಂ.ಕೃಷ್ಣಪ್ಪ ಭಕ್ತಾನಂದ ರಾಮಾನುಜ ಫಲಕ ಅನಾವರಣ ಮಾಡಲಿದ್ದಾರೆ.ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿ.ಪಂ ಸಿಇಒ ಶರತ್, ಉಪವಿಭಾಗಾಧಿಕಾರಿ ಆರ್.ಯಶೋಧ, ಮೈಸೂರಿನ ಜಿಲ್ಲಾ ಸಹಕಾರ ಮಂಡಲದ ಅಧ್ಯಕ್ಷ ಎಚ್.ವಿ.ರಾಜೀವ್, ಭಾಷ್ಯಂ ಸ್ವಾಮೀಜಿ, ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎಸ್.ವೆಂಕಟರಾಮನ್, ಜಿ.ಪಂ ಸದಸ್ಯರಾದ ಎಚ್.ತ್ಯಾಗರಾಜು, ಸಾಮಿಲ್ ತಿಮ್ಮೇಗೌಡ, ಅನುಸೂಯ, ಶಾಂತಲಾ, ಸಿ.ಅಶೋಕ್, ತಾ.ಪಂ ಅಧ್ಯಕ್ಷೆ ರಾಧಮ್ಮ, ಟಿ.ಎಸ್.ಛತ್ರ ಗ್ರಾ.ಪಂ ಅಧ್ಯಕ್ಷೆ ರೇಖಾ ಕೃಷ್ಣೇಗೌಡ ಸೇರಿದಂತೆ ಹಲವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin