ನಾಳೆ ಲೋಕಸಭೆಯಲ್ಲಿ ಜಿಎಸ್‍ಟಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Lok-Sabha

ರಿಯೋ ಡಿ ಜನೈರೋ, ಆ.7 -ತೆರಿಗೆ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆಯಾಗಿರುವ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಲೋಕಸಭೆಯಲ್ಲಿ ನಾಳೆ ಚರ್ಚೆಗೆ ಬರಲಿದ್ದು, ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ಈ ಮಸೂದೆಗೆ ಬೆಂಬಲ ನೀಡಿವೆ.  1991ರ ನಂತರ ಬೃಹತ್ ಆರ್ಥಿಕ ಸುಧಾರಣೆ ಎಂದೇ ಬಿಂಬಿತವಾಗಿರುವ ಜಿಎಸ್‍ಟಿಗೆ ಕಳೆದ ಬುಧವಾರ ರಾಜ್ಯಸಭೆ ಅಂಗೀಕಾರ ನೀಡಿತ್ತು.  ಲೋಕಸಭೆಯಲ್ಲಿ ನಾಳೆ ಜಿಎಸ್‍ಟಿ ಚರ್ಚೆಗೆ ಬರಲಿದೆ. ವಿಧೇಯಕ ಕುರಿತ ಸಭೆಯಲ್ಲಿ ಪ್ರಧಾನಿ ನಾಳೆ ಲೋಕಸಭೆಯಲ್ಲಿ ಜಿಎಸ್‍ಟಿ ಚರ್ಚೆ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ನಿರೀಕ್ಷೆ ಇದೆ.  ಜಿಎಸ್‍ಟಿ ಕುರಿತ ಚರ್ಚೆ ಇರುವುದರಿಂದ  ತಮ್ಮ ಸದಸ್ಯರು ತಪ್ಪದೇ ಸೋಮವಾರದ ಕಲಾಪಕ್ಕೆ ಹಾಜರಾಗಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ನೀಡಿದೆ.

Facebook Comments

Sri Raghav

Admin