ನಾಳೆ ಸಿಹಿ ಸುದ್ದಿ ಕೊಡುವರೇ ಮೋದಿ..?

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ,ಡಿ.30-ಜನವರಿ 1ರಂದು ಕೇಂದ್ರ ಸರ್ಕಾರ ದೇಶದ ಜನತೆಗೆ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ಎಟಿಎಂನಿಂದ ಹಣ ಡ್ರಾ ಮಾಡುವ ಮಿತಿಯನ್ನು ರದ್ದುಗೊಳಿಸಲಿದ್ದು, ಗ್ರಾಹಕ ತನಗೆ ಅಗತ್ಯವಿರುವಷ್ಟು ಹಣವನ್ನು ಡ್ರಾ ಮಾಡಲು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್
ಗಂಗ್ವಾರ್ ಇದಕ್ಕೆ ಪುಷ್ಠಿ ನೀಡಿದ್ದಾರೆ.  ಪ್ರತಿದಿನ 25-30 ಕೋಟಿ ನೋಟುಗಳ ಮುದ್ರಣವಾಗುತ್ತಿದೆ. ಹಾಗಾಗಿ ಜನವರಿ 1 ರ ನಂತರ ನಗದು ವಿತ್‍ಡ್ರಾ ಮಾಡುವ ಮಿತಿಯನ್ನು ತೆಗೆದು ಹಾಕಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಸೀಮಿತ ಪ್ರಮಾಣದಲ್ಲಿ ಹಣ ಡ್ರಾ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ಡಿಸೆಂಬರ್ 30ರ ನಂತರ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಕೆಲ ದಿನಗಳಿಂದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ.

ಶಿಕ್ಷೆಯಿಂದ ವಿನಾಯ್ತಿ:

ಹಳೆಯ ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ ದಂಡ ಮಾತ್ರ. ಜೈಲು ಶಿಕ್ಷೆ ಇಲ್ಲ. ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬï ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಡಿ.31ರಿಂದ ಸುಗ್ರೀವಾಜ್ಞೆ ಅನುಷ್ಠಾನಗೊಳ್ಳಲಿದೆ. ಅದರಲ್ಲಿ ಪ್ರಸ್ತಾವಿತ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಲಾಗಿದೆ. ಜೈಲು ಶಿಕ್ಷೆಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಹಳೆಯ ನೋಟುಗಳು ಇದ್ದರೆ ಕನಿಷ್ಠ 10 ಸಾವಿರ ದಂಡ ಅಥವಾ ನಗದು ಹೊಂದಿರುವ ಐದು ಪಟ್ಟು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸುಗ್ರೀವಾಜ್ಞೆ ಪ್ರಕಾರ ಯಾವನೇ ಒಬ್ಬ ವ್ಯಕ್ತಿ ಹಳೆಯ ಮುಖಬೆಲೆಯ 500, 1 ಸಾವಿರ ಮುಖಬೆಲೆಯ ಹತ್ತು ನೋಟುಗಳನ್ನು ಸಂಗ್ರಹಿಸಿ ಇರಿಸಲು ಅವಕಾಶ ಉಂಟು. ಹಣಕಾಸು ಕ್ಷೇತ್ರದ ಸಂಶೋಧಕರಿಗೆ 25 ನೋಟುಗಳನ್ನು ಇರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದೇ ವೇಳೆ ಜ.1ರಿಂದ ಮಾ.31ರ ಅವಧಿಯಲ್ಲಿ ಹಳೆಯ ಮುಖಬೆಲೆಯ ನೋಟುಗಳನ್ನು ಜಮಾ ಮಾಡುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದರೆ 5 ಸಾವಿರ ದಂಡ ಅಥವಾ ಜಮೆ ಮಾಡಲು ನಿರ್ಧಾರ ಮಾಡಿರುವ ಮೊತ್ತದ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ತಂದು ಅಮಾನ್ಯಗೊಳಿಸಿದ ನೋಟುಗಳನ್ನು ಮರಳಿ ವಿತರಿಸದಂತೆ ಮತ್ತು ನಾಶಮಾಡಲು ಕಾನೂನಾತ್ಮಕ ಅಧಿಕಾರಕ್ಕೆ ಬೆಂಬಲ ನೀಡಿದಂತಾಗುತ್ತದೆ.

ನಾಳೆ ಪ್ರಧಾನಿ ಭಾಷಣ?:

ಇಂದು ಹಳೆಯ 500, 1000 ರೂ. ನೋಟುಗಳನ್ನು ಬ್ಯಾಂಕುಗಳಿಗೆ ಹಾಕಲು ಕೊನೆಯ ದಿನ.. ಇಂದು ಕಳೆದ ಮೇಲೆ, ನಾಳೆ ಶನಿವಾರ ರಾತ್ರಿ 7.30ಕ್ಕೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ..  ಇನ್ನೊಂದು ಕಡೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ , ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಪ್ರಧಾನಿ ಜನಪ್ರಿಯತೆ ಸಹಿಸಲಾಗದೇ ಕಾಂಗ್ರೆಸ್ ಹತಾಶೆಗೊಂಡಿದೆ ಎಂದಿದ್ದಾರೆ. ಈಗ ಸರ್ಕಾರದ ಮುಂದೆ ಎರಡು ಸವಾಲಿದೆ. ಒಂದು ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು. ಈ ಸವಾಲನ್ನು ಗೆದ್ದರೆ, ಪ್ರತಿಪಕ್ಷಗಳ ಬಾಯಿ ತಂತಾನೇ ಮುಚ್ಚಿಕೊಳ್ಳುತ್ತೆ. ಅಲ್ಲಿಗೆ ಎರಡನೇ ಸವಾಲೂ ಗೆದ್ದಂತೆ. ಎಲ್ಲದಕ್ಕೂ ಮೊದಲು ಕೇಂದ್ರ ಸರ್ಕಾರ ಜನರಿಗೆ ಹಣ ತಲುಪಿಸಿ ಸವಾಲು ಗೆಲ್ಲಬೇಕು. ಆದರೆ, ಈಗಲೂ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin