‘ನಾವು ಯಾರೂ ಬಿಜೆಪಿಗೆ ಅರ್ಜಿ ಹಾಕಿಲ್ಲ’ : ಅಶೋಕ್‍ಗೆ ಜೆಡಿಎಸ್ ಬಂಡಾಯ ಶಾಸಕರ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

JDS-Mla

ಚನ್ನಪಟ್ಟಣ,ಆ.12- ನಾವ್ಯಾರು ಬಿಜೆಪಿಗೆ ಬರುತ್ತೇವೆ ಎಂದು ಅರ್ಜಿ ಹಾಕಿಕೊಂಡಿಲ್ಲ. ಅಂತಹ ಸ್ಥಿತಿ ನಮಗೆ ಬಂದಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕರು ಮಾಜಿ ಡಿಸಿಎಂ ಆರ್. ಅಶೋಕ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.   ಮೈಸೂರಿನಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಉತ್ತರ ಕ್ರಿಯೆ  ಕಾರ್ಯದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ವಾಪಸಾಗುವ ಸಂದರ್ಭದಲ್ಲಿ ಚನ್ನಪಟ್ಟಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು , ಬಂಡಾಯ ಶಾಸಕರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ ಎಂದು ಹೇಳಿದ್ದಾರೆ. ಅಂಥ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ತಿಳಿಸಿದರು ಮಾಜಿ ಸಿಎಂ ಕುಮಾರಸ್ವಾಮಿ ನಮ್ಮನ್ನು ಅಷ್ಠ ದಿಕ್ಪಾಲಕರು ಅವರು ಪಕ್ಷಕ್ಕೆ ಅಗತ್ಯವಿಲ್ಲ ಎಂದು ಮಾತನಾಡಿದ್ದಾರೆ.
ಅವರನ್ನು ಮುಖ್ಯಮಂತ್ರಿ ಮಾಡುವಾಗ ನಾವು ಬೇಕಿತ್ತು. ಈಗ ಹಕ್ಕಬುಕ್ಕರು ಅವರ ಜೊತೆಯಾಗಿದ್ದಾರೆ. ಹೀಗಾಗಿ ನಾವು ಬೇಕಾಗಿಲ್ಲ. ಅವರಿಗೆ ಬಹುಪರಾಕ್ ಹಾಕುವವರು ಮುಖ್ಯ. ಪಕ್ಷಕ್ಕೆ ದುಡಿದವರು ಬೇಕಿಲ್ಲ ಎಂದು ಛೇಡಿಸಿದರು.

ಶಾಸಕ ಚಲುವರಾಯಸ್ವಾಮಿ ಮಾತನಾಡಿ, ತಮ್ಮ ಮಗನ ಸಿನಿಮಾ ಹಾಡುಗಳ ಬಿಡುಗಡೆ  ಸಮಾರಂಭದಲ್ಲಿ ಹಗೆತನ ಸಾಧಿಸುವ ಕುಮ್ಮಕ್ಕಿದೆ. ನಾನು ನನ್ನ ಮಗನ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡಿದ್ದರಿಂದ  ಇವರು ನನ್ನ ಮೇಲಿನ ದ್ವೇಷದಿಂದ ಮಂಡ್ಯದಲ್ಲಿ ಮಾಡಲು ಹೊರಟಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಬಾಲಕೃಷ್ಣ, ಎಂಎಲ್‍ಸಿ ಪುಟ್ಟಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವಥ್, ಕೆ.ರಾಜು, ಮುಖಂಡರಾದ ಬೋರ್‍ವೆಲ್ ರಾಮಚಂದ್ರು, ಕೊರಟಗೆರೆ ರವಿ, ಫರೀದ್ ಖಾನ್ ಗೋರಿ, ಅಕ್ರಮ್ ಖಾನ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin