‘ನಾವು ಸಾಫ್ಟ್ವೇರ್ ರಫ್ತು ಮಾಡಿದರೆ, ಪಾಕಿಸ್ತಾನ ಭಯೋತ್ಪಾದಕರನ್ನು ತಪ್ತು ಮಾಡುತ್ತಿದೆ ”

ಈ ಸುದ್ದಿಯನ್ನು ಶೇರ್ ಮಾಡಿ

Modi-01

ಕೇರಳ.ಸೆ.25 : ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶ ಎಂದು ಕುಟುಕಿದ್ದಾರೆ. ಉರಿ ದಾಳಿಯನ್ನು ಮರೆಯುವುದಿಕ್ಕೆ ಸಾಧ್ಯವಿಲ್ಲ ಮತ್ತು 18 ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ. ನಾವು ಸಾಫ್ಟ್ವೇರ್ ರಫ್ತು ಮಾಡಿದರೆ ಅವರು ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದಾರೆ, ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿಯೇ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ನಡೆಯುತ್ತಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯ ಕಾರಿಣಿಯುನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ನರೇಂದ್ರ ಮೋದಿ, “ಉರಿ ಮೇಲಿನ ದಾಳಿಯನ್ನು ನಾವು ಯಾವತ್ತೂ ಮರೆಯುವುದಿಲ್ಲ ಎನ್ನುವುದನ್ನು ಭಯೋತ್ಪಾದಕರು ಗಮನವಿಟ್ಟು ಕೇಳಿಸಿಕೊಳ್ಳಬೇಕು. ನಮ್ಮ 18 ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎನ್ನುವುದನ್ನು ಪಾಕಿಸ್ಥಾನಕ್ಕೂ ಹೇಳಲು ಬಯಸುತ್ತೇನೆ’.  ಯೋಧರ ಸಾವಿಗೆ ಪಾಕಿಸ್ಥಾನವೇ ನೇರ ಹೊಣೆ. 21ನೇ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದು. ಈ ಕನಸನ್ನು ಈಡೇರಿಸಲು ಏಷ್ಯಾದ ಎಲ್ಲ ರಾಷ್ಟ್ರಗಳು ಒಂದು ಹಾದಿಯಲ್ಲಿ ಸಾಗುತ್ತಿದ್ದರೆ, ಒಂದು ದೇಶ (ಪಾಕಿಸ್ಥಾನ) ಮಾತ್ರ ಭಯೋತ್ಪಾದನೆಯನ್ನು ಹರಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿದೆ ಎಂದು ಟೀಕಿಸಿದರು.

‘ಪ್ರತಿಯೊಂದು ದೇಶವೂ ಭಯೋತ್ಪಾದನೆಗೆ ಪಾಕಿಸ್ಥಾನವೇ ಹೊಣೆ ಎನ್ನುವುದನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಏಷ್ಯಾದಲ್ಲಿ ಒಂದೇ ಒಂದು ದೇಶ ಉಗ್ರರಿಗೆ ಸುರಕ್ಷಿತ ಸ್ವರ್ಗವಾಗಿದೆ. ಇದೊಂದೇ ದೇಶ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಅದು ಅಫ್ಘಾನಿಸ್ಥಾನ, ಬಾಂಗ್ಲಾದೇಶ ಅಥವಾ ಇನ್ನಾವುದೇ ದೇಶವಾಗಿರಬಹುದು. ಭಯೋತ್ಪಾದನೆಯ ಕೃತ್ಯ ನಡೆದ ಬಗ್ಗೆ ಸುದ್ದಿ ಕೇಳಿ ಬಂದಾಗಲೆಲ್ಲ, ಭಯೋತ್ಪಾದಕರು ಪಾಕಿಸ್ಥಾನದಿಂದಲೇ ಹೋಗಿ ದುಷ್ಕೃತ್ಯ ಎಸಗಿರುತ್ತಾರೆ ಅಥವಾ ಅಪರಾಧ ಮಾಡಿ ಅಲ್ಲಿಯೇ ನೆಲೆಸಿದವರಾ  ಗಿರುತ್ತಾರೆ.  ಭಾರತ ಯಾವತ್ತೂ ಭಯೋತ್ಪಾದಕರಿಗೆ ತಲೆಬಾಗಿಲ್ಲ. ಭವಿಷ್ಯದಲ್ಲಿಯೂ ಉಗ್ರರಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ನಾವು ಭಯೋತ್ಪಾದನೆಯನ್ನು ನಾಶ ಮಾಡುವ ತನಕವೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರಧಾನಿ ಎಚ್ಚರಿಸಿದರು.

ಪಾಕಿಸ್ಥಾನ 17 ಬಾರಿ ಆತ್ಮಾಹುತಿ ದಾಳಿಕೋರರನ್ನು ಭಾರತದ ಗಡಿಯ ಒಳಕ್ಕೆ ನುಸುಳಲು ಯತ್ನಿಸಿದೆ. ಆದರೆ, ನಮ್ಮ ವೀರ ಸೈನಿಕರು ಅವರನ್ನು ಹೊಡೆದುರುಳಿಸಿದ್ದಾರೆ. ನಾವು 110 ಭಯೋತ್ಪಾದಕರನ್ನು ಸಂಹಾರ ಮಾಡಿ ದ್ದೇವೆ. ಈ ಸಂಖ್ಯೆ ಇತ್ತೀಚಿನ ವರ್ಷಗಳಲ್ಲೇ ಅತ್ಯಧಿಕ. ಭಯೋತ್ಪಾದನೆ ಮಾನವತೆಯ ಶತ್ರು. ಇದೇ ವೇಳೆ ನನ್ನ ದೇಶಬಾಂಧವರಿಗೆ ಭಾರತ ಸುರಕ್ಷಿತ ಎಂದು ಭರವಸೆ ನೀಡಲು ಬಯಸುತ್ತೇನೆ. ನಮ್ಮ ವೀರ ಯೋಧರು ಮತ್ತು ಭದ್ರತಾ ಸಿಬಂದಿಯ ಸಾಹಸಕ್ಕೆ ದೇಶದ 125 ಕೋಟಿ ಜನರು ಹೆಮ್ಮೆ ಪಟ್ಟುಕೊಳ್ಳಬೇಕು ಎಂದು ಗುಡುಗಿದ್ದಾರೆ.

“ನಮ್ಮ ನೆರೆಯ ದೇಶದ ನಾಯಕರು ಭಯೋತ್ಪಾದಕರು ಬರೆದುಕೊಟ್ಟ ಭಾಷಣವನ್ನು ಓದಿ ಹೇಳುತ್ತಾರೆ. ಮತ್ತದೇ ಕಾಶ್ಮೀರದ ರಾಗವನ್ನು ಹಾಡುತ್ತಾರೆ. ಇಂದು ನಾನು ಇಲ್ಲಿ ನಿಂತು ಪಾಕಿಸ್ಥಾನದ ಜನರ ಜತೆ ನೇರವಾಗಿ ಮಾತನಾಡಲು ಬಯಸುತ್ತೇನೆ. 1947ಕ್ಕೂ ಮೊದಲು ನಿಮ್ಮ ಪೂರ್ವಜರು ಇದೇ ನೆಲಕ್ಕೆ ನಮನ ಸಲ್ಲಿಸುತ್ತಿದ್ದರು ಎನ್ನುವುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ. ನೀವು ನಿಮ್ಮ ನಾಯಕರನ್ನು ಕೇಳಿ, ಪಾಕ್ ಆಕ್ರಮಿತ ಕಾಶ್ಮೀರ, ಈ ಹಿಂದಿನ ಬಾಂಗ್ಲಾದೇಶ, ಪಖೂ¤ನಿಸ್ತಾನ್, ಗಿಲಿYಟ್ ಮತ್ತು ಬಲೂಚಿಸ್ತಾನವನ್ನು ನಿರ್ವಹಿಸಲು ಅವರೇಕೆ ವಿಫಲರಾಗಿದ್ದಾರೆ? ಕಾಶ್ಮೀರದ ಬಗ್ಗೆ ಮಾತನಾಡಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದಿದ್ದಾರೆ.

“ನಾನು ಈ ಸವಾಲನ್ನು ಸ್ವೀಕರಿಸುತ್ತೇನೆ. ಭಾರತ ಕೂಡ ಪಾಕ್ ಜತೆ ಯುದ್ಧ ಮಾಡಲು ಬಯಸುತ್ತದೆ ಎಂದು ಹೇಳಲು ಬಯಸುತ್ತೇನೆ. ನಿಮಗೆ ಧೈರ್ಯವಿದ್ದರೆ ಯಾಕೆ ಬಡತನ, ನಿರುದ್ಯೋಗ, ಅನಕ್ಷರತೆಯನ್ನು ಹೋಗಲಾಡಿಸಲು ಹೋರಾಡುತ್ತಿಲ್ಲ. ಎರಡೂ ದೇಶಗಳು ಬಡತನ, ನಿರುದ್ಯೋಗ, ಅನಕ್ಷರತೆಯ ವಿರುದ್ಧ ಹೋರಾಡೋಣ. ಯಾವ ದೇಶ ಜಯ ಸಾಧಿಸುತ್ತದೆ ಎನ್ನುವುದನ್ನು ನೋಡಿಯೇ ಬಿಡೋಣ. ಭಾರತವೋ ಅಥವಾ ಪಾಕಿಸ್ಥಾನವೋ?’ ಎಂದು ಹೇಳಿದ್ದಾರೆ.

 

Facebook Comments

Sri Raghav

Admin