ನಾಸಾಗೆ ಆಯ್ಕೆಯಾದ ಭಾರತ ಸಂಜಾತ ಸೇನಾಧಿಕಾರಿ ರಾಜಾ ಗ್ರೈಂಡರ್ ಚಾರಿ
ಹೌಸ್ಟನ್, ಜೂ.8- ಭೂ ಕಕ್ಷೆ ಮತ್ತು ಅಂತರಿಕ್ಷ ಗರ್ಭ ಸಂಶೋಧನಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತೀಯ ಸಂಜಾತ ಸೇರಿದಂತೆ 12 ಹೊಸ ಖಗೋಳ ಯಾತ್ರಿಗಳನ್ನು ಅಮೆರಿಕ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ-ನಾಸಾ ಆಯ್ಕೆ ಮಾಡಿದೆ. ಇದಕ್ಕಾಗಿ ಸಲ್ಲಿಕೆಯಾಗಿದ್ದ 18,000ಕ್ಕೂ ಹೆಚ್ಚು ದಾಖಲೆ ಪ್ರಮಾಣದ ಅರ್ಜಿಗಳನ್ನು ಪರಿಶೀಲಿಸಿದ ನಂತರ ನಾಸಾ ಅಂತಿಮವಾಗಿ 12 ಮಂದಿ ಆಯ್ಕೆ ಮಾಡಿತು. ಏಳು ಪುರುಷರು ಮತ್ತು ಐವರು ಮಹಿಳೆಯರನ್ನು ಒಳಗೊಂಡ ಈ ತಂಡದಲ್ಲಿ ಭಾರತ ಮೂಲದ ಅಮೆರಿಕ ಲೆಫ್ಟಿನೆಂಟ್ ಕರ್ನಲ್ ರಾಜಾ `ಗ್ರೈಂಡರ್’ ಚಾರಿ (39) ಆಯ್ಕೆಯಾಗಿದ್ದಾರೆ.
ಇವರು 461ನೇ ವಿಮಾನ ಪರೀಕ್ಷಾ ದಳದ ಕಮ್ಯಾಂಡರ್ ಹಾಗೂ ಕ್ಯಾಲಿಫೋರ್ನಿಯಾದ ಎಡ್ವಡ್ರ್ಸ್ ಏರ್ ಫೋರ್ಸ್ ನೆಲೆಯ ಎಫ್-35 ಇಂಟಿಗ್ರೇಟೆಡ್ ಟೆಸ್ಟ್ ಫೋರ್ಸ್ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ 12 ಜನ ಹೊಸ ಅಭ್ಯರ್ಥಿಗಳಲ್ಲಿ ಆರು ಸೇನಾಧಿಕಾರಿಗಳು, ಮೂವರು ವಿಜ್ಞಾನಿಗಳು, ಇಬ್ಬರು ವೈದ್ಯರು ಹಾಗೂ ಸ್ಪೇಸ್-ಎಕ್ಸ್ನ ಪ್ರಮುಖ ಎಂಜಿನಿಯರ್ ಮತ್ತು ನಾಸಾದ ಸಂಶೋಧನಾ ಪೈಲಟ್ ಸಹ ಇದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS