ನಿಖರ ಹವಾಮಾನ ಮಾಹಿತಿ ನೀಡುವ ಇನ್ಸಾಟ್-3ಡಿಆರ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

isro

ಚೆನ್ನೈ,ಸೆ.8- ಹವಾಮಾನ ಮುನ್ಸೂಚನೆಯಲ್ಲಿ ಅತ್ಯಂತ ನಿಖರ ಮಾಹಿತಿ ನೀಡುವ ಇನ್ಸಾಟ್-3ಡಿಆರ್ ಸುಧಾರಿತ ಹವಾಮಾನ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಸಂಜೆ 4 ಗಂಟೆ 10 ನಿಮಿಷಕ್ಕೆ ಉಡಾವಣೆ ಮಾಡಲಿದ್ದು, ಮತ್ತೊಂದು ಸಾಧನೆಯ ಮೈಲಿಗಲ್ಲಾಗಿದೆ.   2,211 ಕೆಜಿ ತೂಕದ ಈ ಉಪಗ್ರಹ ಹೊತ್ತ ಜಿಎಸ್‍ಎಲ್‍ವಿ-ಎಫ್05 ರಾಕೆಟ್‍ನನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿಸಲಾಗುವುದು. ಉಡಾವಣೆಗೊಂಡ ನಂತರ 17 ನಿಮಿಷಗಳಲ್ಲಿ ಈ ಉಪಗ್ರಹವು ಕಕ್ಷೆ ಸೇರಲಿದೆ. ಈ ಎಲ್ಲ ನಿಯಂತ್ರಣ ಕ್ರಮಗಳನ್ನು ಹಾಸನದಲ್ಲಿರುವ ಇಸ್ರೋ ಕೇಂದ್ರ ನಿರ್ವಹಿಸಲಿದೆ.

ಈ ಅತ್ಯಾಧುನಿಕ ಇನ್ಸಾಟ್-3ಡಿಆರ್ ಉಪಗ್ರಹವು ಇನ್ಸಾಟ್ ಉಪಗ್ರಹ ಸರಣಿಗಳಲ್ಲಿ ಒಂದಾಗಿದೆ. ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. ನಂತರ 2015ರ ಆಗಸ್ಟ್‍ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್‍ಎಲ್‍ವಿ-ಡಿ6 ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಇಸ್ರೋ ಗಗನಕ್ಕೆ ಹಾರಿಬಿಟ್ಟಿತ್ತು. ಇದರ ಮುಂದುವರಿದ ಭಾಗವಾಗಿ ಇನ್ಸಾಟ್-3ಆರ್‍ಡಿ ಉಪಗ್ರಹವನ್ನು ಅಂತರಿಕ್ಷಕ್ಕೆ ಚಿಮ್ಮಿಸಲಾಗುವುದು.

ಹವಾಮಾನ ಮುನ್ಸೂಚನೆ ನೀಡುವಲ್ಲಿ ನಿಖರ ಮಾಹಿತಿ ನೀಡುವ ಈ ಅತ್ಯಾಧುನಿಕ ಉಪಗ್ರಹವು ದೇಶಿ ನಿರ್ಮಿತ ಎಂಬುದು ಮತ್ತೊಂದು ವಿಶೇಷ. ಉಡಾವಣಾ ವಾಹಕ-ಜಿಎಸ್‍ಎಲ್‍ಬಿ ರಾಕೆಟ್‍ನಲ್ಲಿ ಸುಧಾರಿತ ತಂತ್ರಜ್ಞಾನದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್‍ನನ್ನು ಇದೇ ಪ್ರಥಮ ಬಾರಿಗೆ ಬಳಸಲಾಗಿದೆ. ಇನ್ಸಾಟ್-3ಡಿಆರ್ ಜೊತೆಗೆ ಅಲ್ಜೀರಿಯಾದ ಉಪಗ್ರಹವೂ ಇದರಲ್ಲಿದೆ. ಭೂಕಕ್ಷೆ ಸೇರಿದ ನಂತರ ಇನ್ಸಾಟ್-3ಡಿಆರ್ ತನ್ನ ಆದ ಸ್ವಯಂ ಪ್ರೊಪಲ್ಷನ್ ವ್ಯವಸ್ಥೆ ಮೂಲಕ ಅಂತಿಮ ಕಕ್ಷೆ ತಲುಪಿ ತನ್ನ ಕಾರ್ಯವನ್ನು ಆರಂಭಿಸಲಿದೆ. ಹವಾಮಾನ ಮತ್ತು ವಾತಾವರಣಕ್ಕೆ ಸಂಬಂಧಿಸಿದಂತೆ ಮೋಡ ಮತ್ತು ವರ್ಷ ಮಾರುತಗಳ ಚಲನೆ, ಸಾಗರಗಳ ಉಬ್ಬರವಿಳಿತ, ಚಂಡಮಾರುತ ಮುನ್ಸೂಚನೆ ಸೇರಿದಂತೆ ಅನೇಕ ಮಾಹಿತಿಗಳನ್ನು ಇದು ಭೂಮಿಗೆ ರವಾನಿಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin