ನಿಟ್ಟೂರು ಗ್ರಾಮದಲ್ಲಿ ಹಸುಗಳ ಸರಣಿ ಸಾವು, ರೇಬಿಸ್ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

cows
ಮಳವಳ್ಳಿ, ಫೆ.17- ಹಲಗೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ಹುಚ್ಚು ನಾಯಿ ಕಡಿತದಿಂದ ಹರಡುತ್ತಿರುವ ರೇಬಿಸ್ ಕಾಯಿಲೆಗೆ ಬಲಿಯಾಗುತ್ತಿರುವ ಹಸುಗಳ ಸಾವಿನ ಸರಣಿ ಮುಂದುವರಿದಿದ್ದು ನೆನ್ನೆಯಿಂದೀಚೆಗೆ ಮತ್ತೆ ನಾಲ್ಕು ಹಸುಗಳು ಸಾವನ್ನಪ್ಪಿವೆ. ಇದರೊಂದಿಗೆ ಗ್ರಾಮದಲ್ಲಿ ರೇಬಿಸ್ ರೋಗಕ್ಕೆ ಬಲಿಯಾದ ಹಸುಗಳ ಸಂಖ್ಯೆ 8ಕ್ಕೆ ಏರಿದೆ. ಕಳೆದ ಒಂದು ವಾರದ ಹಿಂದೆ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಮನೆಯ ಮುಂಭಾಗ ಕಟ್ಟಿದ್ದ 8-10 ಹಸುಗಳಿಗೆ ಕಚ್ಚಿದ್ದು ಹುಚ್ಚು ನಾಯಿ ಕಡಿತದಿಂದ ಈ ಹಸುಗಳು ರೇಬಿಸ್ ಕಾಯಿಲೆಗಳಿಗೆ ಒಳಗಾಗಿದ್ದವು. ನಾಯಿ ಕಡಿತಕ್ಕೆ ಒಳಗಾಗಿದ್ದ ಹಸುಗಳ ಬಾಯಿಯಲ್ಲಿ ಧಾರಕಾರವಾಗಿ ಜೊಲ್ಲುರಸ ಸೋರುವ ಜೊತೆಗೆ ಈ ಹಸುಗಳು ನಾಯಿಯಂತೆ ವಿಚಿತ್ರವಾಗಿ ಕಿರುಚಿಕೊಳ್ಳುತ್ತಿದ್ದವು.
ಹುಚ್ಚು ನಾಯಿ ಹಸುಗಳು ಕಚ್ಚುತ್ತಿರುವುದನ್ನು ಅರಿತ ಗ್ರಾಮಸ್ಥರು ಆ ನಾಯಿಯನ್ನು ಈಗಾಗಲೇ ಸಾಯಿಸಿದ್ದಾರೆ. ಆದರೆ ಇದರ ಕಡಿತಕ್ಕೆ ಒಳಗಾಗಿ ರೇಬಿಸ್ ಕಾಯಿಯಿಂದ ಬಳಲುತ್ತಿರುವ ಹಸುಗಳು ರೋಗದಿಂದ ನರಳುತ್ತಿದ್ದು , ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ರಾತ್ರಿಯೆಲ್ಲಾ ಚೆನ್ನಾಗಿ ಹುಲ್ಲು ಮೆಯ್ಯುತ್ತಿದ್ದ ಹಸುಗಳು ಬೆಳಗಾಗುತ್ತಿದ್ದಂತೆ ಬಾಯಲ್ಲಿ ಜೊಲ್ಲು ಸುರಿಸುತ್ತ ವಿಚಿತ್ರವಾಗಿ ಕಿರುಚತೊಡಗುವುದೇ ಅಲ್ಲದೆ ಅದಾದ 2-3 ದಿನದಲ್ಲಿ ಸಾವನ್ನಪ್ಪುತ್ತಿದ್ದು ಅದರಲ್ಲೂ ಹಾಲು ಕರೆಯುವ ಹಸುಗಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಹಸುಗಳ ಈ ಜೊಲ್ಲಿನಿಂದ ಜನರಿಗೂ ಈ ರೋಗ ಹರಡಬಹುದೆಂಬ ಭೀತಿ ಗ್ರಾಮದಲ್ಲಿ ತೀವ್ರವಾಗಿ ಹರಡಿದ್ದು ಇದರಿಂದ ಇಂತಹ ಹಸುಗಳನ್ನು ಮುಟ್ಟಲು ಸಹ ಜನ ಹಿಂದೇಟು ಹಾಕುತ್ತಿದ್ದು ಈಗಾಗಲೇ ಈ ರೋಗ ಕಾಣಿಸಿಕೊಂಡು ಜೊಲ್ಲು ಸುರಿಸುವ 15ಕ್ಕೂ ಹೆಚ್ಚು ಹಸುಗಳನ್ನು ಗ್ರಾಮದ ಹೊರವಲಯದಲ್ಲಿ ಕಟ್ಟಿಹಾಕಿದ್ದಾರೆ.

ಮೊನ್ನೆಯವರೆಗೆ ನಾಲ್ಕು ಹಸುಗಳು ಸತ್ತಿದ್ದರೆ ನೆನ್ನೆಯಿಂದೀಚೆಗೆ 4 ಹಸುಗಳು ಸತ್ತಿದ್ದು ಹಸುಗಳ ಸಾವಿನ ಸರಣಿ ಮುಂದುವರಿದಿದೆ ಎಂದು ತಾ ಪಂ ಸದಸ್ಯ ಮುತ್ತುರಾಜ್ ಈ ಸಂಜೆಗೆ ತಿಳಿಸಿದ್ದಾರೆ. ಹಸುಗಳ ಸಾವಿನ ಸರಣಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮೊಕ್ಕಂ ಹೂಡಿರುವ ಲಿಂಗಪಟ್ಟಣ ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ್ ನೇತೃತ್ವದ ತಂಡ ಗ್ರಾಮದ ಎಲ್ಲಾ ಹಸುಗಳಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿದ್ದ ವಿಜ್ಞಾನಿಗಳ ತಂಡ ರಾಸುಗಳ ಪರಿಶೀಲನೆ ಜೊತೆಗೆ ರೋಗದಿಂದ ಸತ್ತಿರುವ ಹಸುವಿನ ತಲೆಯನ್ನು ಸಂಶೋಧನೆಗಾಗಿ ಕೊಂಡೊಯ್ದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin