ನಿಧಾನಗತಿಯ ಆಟಕ್ಕೆ ಆಸೀಸ್ ಮೊರೆ

ಈ ಸುದ್ದಿಯನ್ನು ಶೇರ್ ಮಾಡಿ

Match--Cricket-v

ಬೆಂಗಳೂರು, ಮಾ.5-ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿದ್ದು, ತಾಳ್ಮೆಯ ಆಟ ಪ್ರದರ್ಶಿಸುತ್ತಿದೆ. ಬ್ಯಾಟಿಂಗ್‍ಗೆ ನೆರವಾಗಿರುವ ಪಿಚ್‍ನಲ್ಲಿ ಸ್ಪಿನ್ನರ್‍ಗಳಿಗೆ ನೆರವು ನೀಡಿದ್ದು, ಹೀಗಾಗಿ ಭಾರತದಂತೆ ತಪ್ಪು ಮಾಡಬಾರದೆಂಬ ಎಚ್ಚರಿಕೆಯಿಂದ ಆಸೀಸ್ ಬ್ಯಾಟ್ಸ್‍ಮನ್‍ಗಳು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.  ವಿಕೆಟ್ ನಷ್ಟವಿಲ್ಲದೆ 40 ರನ್‍ಗಳಿಂದ ದಿನದಾಟ ಆರಂಭಿಸಿದ ವಾರ್ನರ್ ಹಾಗೂ ರೆನ್ ಶಾ ಜೋಡಿಯು ಮೊದಲ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.

ಆರಂಭಿಕ ಜೋಡಿಯನ್ನು ಅಶ್ವಿನ್ ಬೇರ್ಪಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಡೇವಿಡ್ ವಾರ್ನರ್ 33 ರನ್ ಆಗಿದ್ದಾಗ ಅಶ್ವಿನ್ ಬೌಲಿಂಗ್‍ನಲ್ಲಿ ಬೋಲ್ಡಾದರು.  ನಂತರ ಮೊದಲನೆ  ಟೆಸ್ಟ್‍ನಲ್ಲಿ ಶತಕ ಸಿಡಿಸಿ ಅದ್ಭುತ ಫಾರ್ಮ್‍ನಲ್ಲಿರುವ ನಾಯಕ ಸ್ಟೀವನ್ ಸ್ಮಿತ್ ಕೇವಲ 8 ರನ್‍ಗಳಿಸಿ ಜಡೇಜ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ಸಹಾಗೆ ಕ್ಯಾಚ್ ಇತ್ತು ನಿರ್ಗಮಿಸಿದರು. ರೆನ್‍ಶಾ ಜೊತೆಗೂಡಿ 2ನೇ ವಿಕೆಟ್ ಜೊತೆಯಾಟದಲ್ಲಿ 30 ರನ್ ಸೇರಿಸಿದರು.   ವಿರಾಮಕ್ಕೂ ಮುನ್ನ ಭಾರತ ಕಾಂಗರೂ ಪಡೆಯ ಎರಡು ಪ್ರಮುಖ ವಿಕೆಟ್‍ಗಳನ್ನು ಕಬಳಿಸಿ ಸಮಾಧಾನಕಂಡಿತು. ಇತ್ತ ರೆನ್ ಶಾ ಎಚ್ಚರಿಕೆಯ ಆಟವಾಡುತ್ತಿದ್ದು , ಭಾರತದ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.

ಸ್ಪಿನರ್‍ಗಳಿಗೆ ಪೂರಕವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್‍ನಲ್ಲಿ ಆಸೀಸ್ ಪಡೆ 1.82 ರನ್ ರೇಟ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ನಿಧಾನಗತಿಯ ಆಟವಾಡಿ ಜಾಣ್ಮೆ ಪ್ರದರ್ಶಿಸುತ್ತಿದೆ.
ಪತ್ರಿಕಾ ಮುದ್ರಣವಾಗುವ ಸಮಯದಲ್ಲಿ ಆಸೀಸ್ 58.1 ಓವರ್‍ಗಳಲ್ಲಿ 107 ರನ್ ಕಲೆ ಹಾಕಿದೆ. ರೆನ್‍ಶಾ 44, ಮಾರ್ಷ್ 14 ರನ್ ಗಳಿಸಿ ಆಟವಾಡುತ್ತಿದ್ದರು.  ನಾಯಕ ವಿರಾಟ್ ಕೊಹ್ಲಿ ಆಸೀಸ್ ತಂಡವನ್ನು ಕಟ್ಟಹಾಕುವ ಎಲ್ಲ ತಂತ್ರಗಳನ್ನು ಪ್ರಯೋಗಿಸುತ್ತಿದ್ದು , ಮೊದಲ ಟೆಸ್ಟ್ ಪಂದ್ಯ ಹೀನಾಯವಾಗಿ ಸೋತಿರುವ ಕಹಿಯನ್ನು ಮರೆಸಲು ತಂಡವನ್ನು ಮುನ್ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin