ನಿಧಿಗಾಗಿ ಮೊಮ್ಮಗಳ ಕೊಲೆ ಮಾಡಿದ್ದ ತಾತ-ಸಹಚರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

murder-6

ಯಾದಗಿರಿ,ಅ.17- ನಿಧಿ ಆಸೆಗಾಗಿ ತನ್ನ ಮೊಮ್ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ತಾತ ಮತ್ತು ಆತನ ಸಹಚರನನ್ನು ವಡಗೇರಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ ಬೂದನಾಳ ಗ್ರಾಮದ ರಾಚಯ್ಯ ಸ್ವಾಮಿ ಹಿರೇಮಠ(60), ಕೊಂಕಲ್ ಗ್ರಾಮದ ಹನುಮಂತ ಪೂಜಾರಿ(55) ಬಂಧಿತ ಆರೋಪಿಗಳು. ರಾಚಯ್ಯ ಕಳೆದ 4ರಂದು ನಿಧಿಯ ಆಸೆಗಾಗಿ ಸಹಚರ ಹನುಮಂತ ಪೂಜಾರಿಯೊಂದಿಗೆ ಮೊಮ್ಮಗಳಾದ ಅಮೃತಾ(18 ತಿಂಗಳ )ಳಿಂದ ಬೂದಿನಾಳದ ತನ್ನ ಮನೆಯ ಮುಂದೆ ಪೂಜೆ ನೆರವೇರಿಸಿ ನಂತರ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಬಾವಿಗೆ ಎಸೆದು ಪರಾರಿಯಾಗಿದ್ದರು. ಬಾವಿಯಲ್ಲಿ ಅಮೃತಾಳ ಶವ ಪತ್ತೆಯಾದ ನಂತರ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin