ನಿಮ್ಮನ್ನು ಒಂದು ಕ್ಷಣ ಮಂತ್ರ ಮುಗ್ದವಾಗಿಸುತ್ತವೆ ಈ ಚಿತ್ರಗಳು…!

ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬುದಕ್ಕೆ ಚಿತ್ರಕಲಾ ಪರಿಷತ್ನ ಛಾಯಾಚಿತ್ರ ಪ್ರದರ್ಶನ ಸಾಕ್ಷಿಯಾಗಿತ್ತು.
ನಗರದ ಚಿತ್ರಕಲಾ ಪರಿಷತ್ನಲ್ಲಿ ಫೋಟೊ ಜರ್ನಲಿಸ್ಟ್ ಅಸೋಸಿ ಯೇಷನ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನದಲ್ಲಿ ಬಡತನ, ಹಸಿವು, ಕೂಲಿಕಾರರ ಸಮಸ್ಯೆ, ಪ್ರತಿಭಟನೆ, ಬರ, ನೆರೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು ಗಮನಸೆಳೆದವು.
ನಗರದ ಈಜಿಪುರದ ಕಟ್ಟಡ ಕುಸಿತ ದುರಂತದಲ್ಲಿ ಗಾಯಗೊಂಡು ಪವಾಡ ಸದೃಶವಾಗಿ ಬದುಕುಳಿದ ಸಂಜನಾಳನ್ನು ಭದ್ರತಾ ಸಿಬ್ಬಂದಿಗಳು ರಕ್ಷಿಸಿ ಹೊರತರುತ್ತಿದ್ದ ಛಾಯಾಚಿತ್ರ ನೋಡುಗರ ಕಣ್ಣಾಲಿಗಳನ್ನು ತುಂಬಿಸುವಂತಿತ್ತು. ಮೃತಪಟ್ಟ ತನ್ನ ಕರುಳ ಕುಡಿಯನ್ನು ತಾಯಿ ವಾನರವೊಂದು ಬಿಗಿದಪ್ಪಿ ರೋಧಿಸುತ್ತಿರುವ ಚಿತ್ರವಂತೂ ಪ್ರಾಣಿಗಳ ಮೂಕವೇದನೆಗೆ ಸಾಕ್ಷಿಯಾಗಿತ್ತು. ಬರಗಾಲದಲ್ಲಿ ಪ್ರಾಣಿಗಳು ಮೇವಿಗಾಗಿ ಪರಿತಪಿಸುವ ಚಿತ್ರಗಳು ನೋಡುಗರ ಮನಕಲಕುವಂತಿತ್ತು. ಪ್ರದರ್ಶನದಲ್ಲಿ ಕೇವಲ ನೋವಿನ ಛಾಯಾಚಿತ್ರಗಳು ಮಾತ್ರವಲ್ಲದೆ ಕಲಾ ಸಂಸ್ಕತಿಯನ್ನು ಬಿಂಬಿಸುವಂತಹ ವೈವಿಧ್ಯಮಯ ಫೋಟೋಗಳು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾದವು.

ಮಧುರೈನ ಮೀನಾಕ್ಷಿ ದೇವ ಸ್ಥಾನದ ಸಾವಿರ ಕಂಬಗಳ ಮಂಟಪ ಬಹಳ ವಿಶೇಷವಾಗಿತ್ತು. ಒಂದು ಕಂಬ ಇನ್ನೊಂದಕ್ಕಿಂತ ವಿಭಿನ್ನವಾಗಿದ್ದು, ಶಿಲ್ಪಕಲೆಗಳ ವೈಶಿಷ್ಟ್ಯತೆ ಛಾಯಾಚಿತ್ರದಲ್ಲಿ ಎದ್ದು ಕಾಣುತ್ತಿತ್ತು. ಒಟ್ಟಾರೆ ಮೂರು ದಿನಗಳ ಕಾಲ ನಡೆದ ಛಾಯಾಚಿತ್ರ ಪ್ರದರ್ಶನ ಚಿತ್ರಪ್ರೇಮಿಗಳ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಜೀವನದ ನೆನಪುಗಳನ್ನು ಛಾಯಾಚಿತ್ರದ ಮೂಲಕ ಸೆರೆ ಹಿಡಿಯುವುದು ಸಾಮಾನ್ಯವಲ್ಲ. ಅದು ಕಾಲವನ್ನೇ ಸೆರೆ ಹಿಡಿದಂತೆ. ಛಾಯಾಚಿತ್ರಗಳು ಸಾಕಷ್ಟು , ನೋವು, ಹಸಿವು ಕಷ್ಟಗಳಿಗೆ ಸಂಬಂಧಿಸಿದ್ದೆಂದು ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಪ್ರದರ್ಶನದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಪ್ರದರ್ಶನ ಉದ್ಘಾಟಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯ ಮಂಡನೆ ಪುಸ್ತಕದಲ್ಲಿ ಒಂದು ಛಾಯಾಚಿತ್ರ ಮಿಲಿಯನ್ ಪದಗಳಿಗೆ ಸಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು , ಛಾಯಾಚಿತ್ರಗಳ ನೈಜ ಚಿತ್ರಣಕ್ಕೆ ಸಾಕ್ಷಿಯಂತಿತ್ತು.
ವಿವಿಧ ಮಾಧ್ಯಮಗಳ ಹಲವಾರು ಫೋಟೋಗ್ರಾಫರ್ಗಳ ಕ್ಯಾಮೆರಾ ದಲ್ಲಿ ಸೆರೆಯಾದ ನೂರಾರು ಅಪರೂಪದ ಛಾಯಾಚಿತ್ರಗಳಲ್ಲಿ ಐದು ಛಾಯಾಚಿತ್ರಗಳು ಜನ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿ ಯಾದವು. ವಿಶೇಷ ಡೈರಿ:ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಮತ್ತು ಅವರ ಸಂಪೂರ್ಣ ವಿವರಗಳನ್ನೊಳಗೊಂಡ A Pictorial Introductuon ಎಂಬ ಡೈರಿ ವಿಶೇಷ ಗಮನ ಸೆಳೆಯಿತು. ಈ ಡೈರಿ ಛಾಯಾಗ್ರಾಹಕರ ಭಾವಚಿತ್ರ, ವಿಳಾಸ, ಫೋನ್ ನಂಬರ್, ಛಾಯಾಚಿತ್ರಕ್ಕೆ ತಕ್ಕಂತೆ ಶೀರ್ಷಿಕೆ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಫೋಟೋಗ್ರಾಫರ್ಗಳಿಗೆ ವಿಶೇಷವೆನಿಸಿದ ಈ ಡೈರಿಯನ್ನು ಕೇಂದ್ರ ಸಚಿವ ಅನಂತಕುಮಾರ್ ಲೋಕಾರ್ಪಣೆ ಮಾಡಿದರು.
ಇಂತಹ ಅಪರೂಪದ ಛಾಯಾ ಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ, ಜನದಟ್ಟಣೆ ಪ್ರದೇಶಗಳಲ್ಲಿ ಪ್ರದರ್ಶಿಸಿದರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬಹುದು ಎಂದು ಅನಂತಕುಮಾರ್ ಅಭಿಪ್ರಾಯ ಪಟ್ಟರು. ಉತ್ತಮ ನಿರ್ಧಾರ: ಜೀವನದ ಅದ್ಭುತ ಕ್ಷಣಗಳನ್ನು ಮತ್ತೆ ಕಣ್ಮುಂದೆ ತರಿಸುವಲ್ಲಿ ಛಾಯಾಚಿತ್ರಗಳು ಕಾರಣವಾಗುತ್ತವೆ. ಛಾಯಾಗ್ರಾಹಕ ಕ್ಲಿಕ್ಕಿಸುವ ಒಂದು ಅಪರೂಪದ ಚಿತ್ರ ಆತನ ಕೈಚಳಕ ತೋರಿಸುತ್ತದೆ. ಒಂದು ಉತ್ತಮ ಕ್ಯಾಮೆರಾ ಮತ್ತು ಛಾಯಾಗ್ರಾಹಕನ ಕ್ರಿಯಾ ಶೀಲತೆ ಒಂದು ಅಪರೂಪದ ಚಿತ್ರಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಮುಂದಿನ ಪೀಳಿಗೆಗೂ ಅದು ಮಾರ್ಗದರ್ಶಕವಾಗುತ್ತದೆ. ಹೀಗಾಗಿ ಅಪರೂಪದ ಚಿತ್ರಪ್ರದರ್ಶನಗಳನ್ನು ಮುಂದಿನ ವರ್ಷ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಲು ಸಂಘಟಕರು ತೀರ್ಮಾನಿಸುವುದು ಉತ್ತಮ ನಿರ್ಧಾರ ಎನ್ನುತ್ತಾರೆ ಹಿರಿಯ ಛಾಯಾಗ್ರಾಹಕರೊಬ್ಬರು.

ಶೀರ್ಷಿಕೆ ಅಗತ್ಯ: ಪ್ರದರ್ಶನದಲ್ಲಿಡಲಾಗಿದ್ದ ಛಾಯಾಚಿತ್ರಗಳಲ್ಲಿ ಕೆಲವೊಂದು ಚಿತ್ರಗಳೂ ಅದ್ಭುತವಾಗಿತ್ತು. ಕೆಲ ಛಾಯಗ್ರಾಹಕರ ಸಮಯ ಪ್ರಜ್ಞೆ ಮತ್ತು ತಾಳ್ಮೆ ಚಿತ್ರದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಚಿತ್ರಕ್ಕೆ ತಕ್ಕಂತೆ ಒಂದು ವಾಕ್ಯದ ಶೀರ್ಷಿಕೆ ನೀಡಿದ್ದರೆ ಇನ್ನು ಹೆಚ್ಚು ಪ್ರಿಯವಾಗುತ್ತಿತ್ತು ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿತ್ತು.
ಪ್ರೆಸ್ಕ್ಲಬ್ನಲ್ಲಿ ಲಭ್ಯ: ಛಾಯಾಚಿತ್ರ ಗ್ರಾಹಕರ ಸಂಪೂರ್ಣ ವಿವರ ಮತ್ತು ಅಪರೂಪದ ಫೋಟೊಗಳನ್ನು ಒಳಗೊಂಡ ವಿಶೇಷ ಡೈರಿ ಮಾರಾಟಕ್ಕೆ ಲಭ್ಯವಿದ್ದು ಆಸಕ್ತರು ಪ್ರೆಸ್ಕ್ಲಬ್ನಲ್ಲಿ ಡೈರಿ ಕೊಂಡುಕೊಳ್ಳಬಹುದಾಗಿದೆ. ನೀವು ಪ್ರದರ್ಶನವನ್ನು ಮಿಸ್ ಮಾಡ್ಕೊಂಡ್ವಿ ಅನ್ಕೋತ್ತಿದ್ದೀರಾ, ಡೋಂಟ್ ವರಿ… ಛಾಯಾ ಚಿತ್ರ ಪ್ರದರ್ಶನದಲ್ಲಿದ್ದ ಫೋಟೊ ಗಳನ್ನು ನೀವು http://www.pjab.in ನಲ್ಲಿ ನೋಡಬಹುದು.



Bengaluru & its Growth… (Yesterday-Today-Tomorrow)
The growth of Bengaluru city over the environment seen between the frame of Vidhana Soudha pillars in on a cloudy evening. -Photo/ Anand Bakshi





Nada Kusti had inspired youngsters to embrace the tradition with keen interest. But in the absence of patronage in the form of infrastructure (coaches for freestyle wrestling and necessary facilities) and financial backing, the tradition is on the wane.The Picture short in India, Bangalore





Karnataka (yellow jersey) ousted Kerala (blue jersey) in the finals at South Zone Inter State Mens & Womens Kho Kho tournament at Chandrakant Sports Stadium in Kalaburgi on Sunday. – PHOTO / PRASHANTH H G




After continues rain in city, roads were damaged craters surface in several parts, leading to motorists stranded for hours seen near Jnabharathi, and in front of RR Nagar junction , with land slide on Vrishabhavathi River, on Mysore road, the civic authorities yet to restore roads in Bangalore on Monday.

08092015-Bangalore- Bad road posing danger to motorists on Hegde Nagar main road in Bengaluru on Monday. Photo/ Shashidhar B.


