ನಿಮ್ಮ ಮಕ್ಕಳನ್ನು LKG-UKG ಸೇರಿಸುವ ಮುನ್ನ ಈ ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ

ಈ ಸುದ್ದಿಯನ್ನು ಶೇರ್ ಮಾಡಿ

lkg-ukg

ನೂರೆಂಟು ಕನಸುಗಳ ಹೊತ್ತು ಕಟ್ಟಿಕೊಂಡ ಹೊಸ ಬದುಕಿಗೆ ಆಶಾಕಿರಣವಾಗಿ ಬಂದ ಮತ್ತೊಂದು ಚೇತನ ಮಗು. ಪುಟ್ಟ ಪುಟ್ಟ ಕಂಗಳಲಿ ನೂರೆಂಟು ವಿಚಿತ್ರಗಳನ್ನು ಅರಿಯುವ, ಅನುಭವಿಸುವ ಬಯಕೆ ಹೊತ್ತ ಮಗು ಪಾಲಕರ ಪಾಲಿನ ಜೀವವೆಂದೇ ಹೇಳಬೆಕು. ಅದರ ಮುಗ್ಗ ನೋಟ, ನಿಷ್ಕಲ್ಮಶ ನಗು, ತೊದಲು ಮಾತುಗಳಿಗೆ ಮನ ಸೋಲದವರೇ ಇಲ್ಲ, ಇಷ್ಟೊಂದು ಪ್ರೀತಿಸುವ ಮಕ್ಕಳನ್ನು 3 ವರ್ಷ ಆಗುತ್ತಿದ್ದಂತೆ ಯಾವ ಶಾಲೆಗೆ ಸೇರಿಸಬೇಕು? ರೆಪುಟೆಡ್ ಶಾಲೆ ಯಾವುದು, ಎಲ್ಲಿ, ಸ್ಟಾಂಡರ್ಡ್, ಡೊನೆಷನ್ ಎಷ್ಟಿದೆ? ಹೀಗೆ ಏನೇನೋ ಲಕ್ಕಾಚಾರಗಳು ನಿಮ್ಮ ಮನದಲ್ಲಿ ಓಡಾಡುತ್ತಿರುತ್ತವೆ. ಹಾಗೆಯೇ ನಮ್ಮ ಮಗುವಿಗೆ ಅಂಥಹ ಶಾಲೆಯಲ್ಲಿ ಸೀಟು ಸಿಗುತ್ತಾ ಎಂದು ಕನಸು ಕಾಣುವ ಪಾಲಕರಿಗೆ ಲೆಕ್ಕವಿಲ್ಲ.ಹಾಗಂತ ಕೆಲವು ಪಾಲಕರು 6 ತಿಂಗಳು ಮೊದಲೇ ತಮಗೆ ಸರಿ ಎನಿಸಿದ ಶಾಲೆಗಳಿಗೆ ಎಲ್ಕೆಜಿ ಮತ್ತು ಯುಕೆಜಿಗೆ ಲಕ್ಷಗಟ್ಟಲೆ ಡೊನೆಷನ್ ಕೂಡುವುದು, ಸಾಲದಕ್ಕೆ ಮಂತ್ರ್ರಿಮಹೋದಯರ ರೆಕಮಂಡೇಷನ್ ಲೆಟರ್‍ಗಳನ್ನು ನೀಡಿ, ಮುದ್ದಾದ ಮಗುವಿಗೆ ಅಂತಹ ಶಾಲೆಯಲ್ಲಿ ಸೀಟು ಗಿಟ್ಟಿಸಿಬಿಟ್ಟರೆ ಏನೋ ನೊಬೆಲ್ ಪ್ರಶಸ್ತಿ ಪಡೆದಷ್ಟು ಸಂತೋಷ ಪಡುವವರಿಗೆ ನಮ್ಮಲ್ಲಿ ಕೊರತೆಯೇನೂ ಇಲ್ಲ.ಆದರೆ ಪಾಲಕರು ಇಂತ ಸಂದರ್ಭಗಳಲ್ಲಿ ತಮ್ಮ LKG-UKG ವಿದ್ಯಾಭ್ಯಾಸನ್ನೂಮ್ಮೆ ಸಮಾಧಾನದಿಂದ ನೆನಸಿಕೂಂಡರೆ ತಮ್ಮ ತಮ್ಮ ಉದ್ವೇಗಗಳಿಗೆ ಸ್ವಲ್ಪವಾದರೂ ಸಮಾದಾನ ಕಂಡುಕೊಳ್ಳಬಹುದು.
ನೀವು ಮಕ್ಕಳ ಮೇಲಿಟ್ಟ್ಟ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸುವಾಗ ತೀರಾ ಲಕ್ಷಗಟ್ಟಲೆ ಡೊನೆಷನ್ ಸುರಿಯುವುದು ನಿಮಗೆ ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆಯೊ ಗೊತಿಲ್ಲ. ನಿಮ್ಮ ಬಳಿ ಹಣವಿದೆ ಕೊಡಿ. ನಮ್ಮದೇನೂ ಅಭ್ಯಂತರವಿಲ್ಲ.

ಅದು ನಿಮ್ಮ ಅಲೋಚನಾ ವಿಧಾನದ ವಿವೇಚನೆಗೆ ಬಿಟ್ಟ ಪರಮಾಧಿಕಾರ. ಆದರೆ ಅದಕ್ಕೆ ನಿಮ್ಮ ಮಗುವಿನ ಮೇಲಿನ ಪ್ರೀತಿಯನ್ನು ಮಾತ್ರ ತಳುಕು ಹಾಕಬೇಡಿ ಎನ್ನುವುದಷ್ಟೇ ಈ ಲೇಖನದ ಉದ್ದೇಶ. ಕಾರಣವೇನೆಂದರೆ ವಾಸ್ತವ ಬೇರೇನೇ ಇರುತ್ತದೆ. ಅದೇ ಶಾಲೆಗೆ ಡೊನೆಷನ್ ಕೊಡದೆ ಯಾವುದೇ ರೆಕಮೆಂಡೇಷನ್ ಇಲ್ಲದೆಯೇ ಶೇ. 25ರಷ್ಟು ಮಕ್ಕಳು ಆರ್‍ಟಿಇ ಅಡಿಯಲಿ ದಾಖಲಾಗುತ್ತಾರೆ. ನೆನಪಿರಲಿ ಮಗುವಿನ ಕಲಿಕೆಗೆ ಮತ್ತು ಅದರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ನಿಮ್ಮ ಸ್ಟೇಟಸ್ ಆಗಲಿ ಹಣವಾಗಲಿ ಇಲ್ಲ್ಲಿ ಯಾವ ಕೆಲಸಕ್ಕೂ ಬರುವುದಿಲ್ಲ. ನಿರ್ಮಲ ಮನಸ್ಸಿನಿಂದ ತಾಳ್ಮೆ ವಹಿಸಿ ಪಾಠ ಹೇಳಿ ಕೂಡುವ ಅಮ್ಮನಂತಹ ಶಿಕ್ಷಕಿ ನಿಮ್ಮ ಮಗುವಿಗೆ ಸಿಗದೇ ಹೋದರೆ ನಿಮ್ಮ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗುತ್ತದೆ.

ಆದ್ದರಿಂದ ನಿಮ್ಮ ಮಗುವಿನ ಶಿಕ್ಷಕಿಯ ಪೂರ್ವಾಪರಗಳನ್ನು ವಿಚಾರಿಸಿ ಒಳ್ಳೆಯ ಅಭಿಪ್ರಾಯ ಮೂಡಿದಾಗ ಮಾತ್ರ ನಿಮ್ಮ ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಿದೆ. ಆದ್ದರಿಂದ ಪಾಲಕರಿಗೆ ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಲಾಗಿದೆಅದರ ಕೆಲವು ಅಂಶಗಳನ್ನು ಪಾಲಿಸಿದರೆ ಉತ್ತಮವೆನಿಸುತ್ತದೆ. ನೀವು ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಮುನ್ನ ವಹಿಸಲೇಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಇಂತಿವೆ.
1. ಸರ್ಕಾರದಿಂದ ನಿಯಮಾನುಸಾರ ಅನುಮತಿಯನ್ನು ಪಡೆದು ಶಾಲೆಯನ್ನು ನಡೆಸಲಾಗುತ್ತಿದೆಯೇ ಅಥವಾ ಇಲ್ಲವೇ?

2. ಅನುಮತಿಯನ್ನು ಪಡೆದಿದ್ದರೆ ಅದು ತನ್ನ ಅನುಮತಿಯನ್ನು ಈ ವರ್ಷಕ್ಕೆ ಅಂದರೆ 2017-2018 ರ ಶೈಕ್ಷಣಿಕ ಸಾಲಿಗೆ ರಿನಿವಲ್ ಮಾಡಿಕೂಂಡಿದೆಯೇ?

3. ಅನುಮತಿ ಪಡೆದ ನಂತರ ಅಧಿಕ್ರೃತವಾಗಿ ಶಾಲೆಗೆ ಡೈಸ್ ಕೋಡ್ ನೀಡಲಾಗಿದೆಯೇ?

4. ಸುಪ್ರೀಂ ಕೋರ್ಟ್ ಆದೇಶದಂತೆ ಖಾಸಗಿ ಶಾಲೆಗಳು ಡೊನೆಷನ್ ಪಡೆವಯವಂತಿಲ್ಲ ಎಂದು ಆದೇಶ ಹೊರಡಿಸಿದೆ. ಸಾದ್ಯವಾದರೆ ಅದನೊಮ್ಮೆ ತಿಳಿಯುವುದು ಸೂಕ್ತ.

5. ಶಾಲೆ ನಿಮ್ಮ ಮನೆಗೆ ಆದಷ್ಟೂ ಹತ್ತಿರವಿದ್ದರೆ ಅತ್ಯಂತ ಒಳ್ಳೆಯದು. ಚಿಕ್ಕ ವಯಸ್ಸಿಗೆ ನಿರಂತರ ಜರ್ನಿ ಸೂಕ್ತವಲ್ಲ.

5. LKG-UKG ಗಳಿಗೆ ಅರ್ದ ದಿನ ಮಾತ್ರ ಶಾಲೆ ಇದ್ದರೆ ಅತ್ಯಂತ ಉತ್ತಮ.

6. ನಿಮ್ಮ ಮಗುವನ್ನು ಸೇರಿಸುವ ಶಾಲೆಯಲ್ಲಿ ಶಿಕ್ಷಕಿಯರು ಕಡ್ಡಾಯವಾಗಿ ಎನ್‍ಟಿಸಿ (ನರ್ಸರಿ ಟ್ರೆನಿಂಗ್ ಕೋರ್ಸ) ಕೋರ್ಸ್ ಮಾಡಿದ್ದಾರೆಯೆ ಅಥವ ಇಲ್ಲವೇ ಎಂದು ತಿಳಿದು ಸೇರಿಸಿದರೆ ಬೆಟರ್.

7. ನಿಮ್ಮ ಮಗುವಿಗೆ ಅಕ್ಷರ ಹೇಳಿಕೊಡುವ ಶಿಕ್ಷಕರನ್ನು ಭೇಟಿ ಮಾಡಿ ಅವರೊಟ್ಟಿಗೆ ಮಾತನಾಡಿ ಅವರು ಸರಿಯಾಗಿ ತಾಳ್ಮೆಯಿಂದ ಕಲಿಸಬಲ್ಲರು ಎಂಬುದನ್ನು ತಿಲಿಯದಲೆ ಶಾಲೆಗೆ ಸೇರಿಸಿದರೆ ನಿಮ್ಮ ಮಗುವಿನ ಕಲಿಕೆಯ ಕನಸಿಗೆ ಯಾರೂ ಗ್ಯಾರಂಟಿ ಕೊಡಲಾರರು.

8. ಶಾಲಾ ಬ್ಯಾಗ್ ಹೆಚ್ಚು ತೂಕವಿರದಿದ್ದರೆ ಮಗುವನ್ನು ಅಂತಹ ಶಾಲೆಗೆ ಸೇರಿಸಿದರೆ ಒಳ್ಳೆಯದು.

9. ಶಾಲಾ ವೇಳೆ 9 ಗಂಟೆಗಿಂತ ಮುಂಚೆ ಇದ್ದರೆ ಮಗುವಿನ ನಿದ್ರೆಗೆ ತೊಂದರೆಯಾಗುತ್ತದೆ. ಮಕ್ಕಳಿಗೆ ಕನಿಷ್ಟ 8 ರಿಂದ 10 ತಾಸು ನಿದ್ರೆ ಬೇಕೇ ಬೇಕು.

10. ಮಕ್ಕಳು ಆಟ ಆಡಲು ಮತ್ತು ಅದಕ್ಕೆ ತಕ್ಕ ಸುರಕ್ಷತಾ ಕ್ರಮಗಳು ಹಾಗು ಮೂಲಭೂತ ಸೌಲಭ್ಯಗಳು ಸರಿಯಾಗಿ ಇವೆಯೆ ಎಂಬುದನ್ನು ಪರೀಕ್ಷಿಸಬೇಕು.

11. ಕೆಲವು ಶಾಲೆಗಳು ಓವರ್ ಬಿಲ್ಡ್ ಅಪ್ ಕೊಟ್ಟು ನಿಮಗೆ ಹೇಳುವುದೇ ಒಂದು ಆದರೆ ಅಲ್ಲಿರುವ ವ್ಯವಸ್ಥೆಯೇ ಒಂದು ಇರುತ್ತವೆ. ಹಾಗಾಗಿ ಅಂತಹವುಗಳನ್ನು ಮುದ್ದಾಂ ಪರಿಶೀಲಿಸಿಕೂಂಡರೆ ಒಳಿತು. ಈ ವಿಷಯದಲ್ಲಿ ನಿಮ್ಮ ಮನಸ್ಸಿಗೆ ಸಮಾಧಾನವಾಗದಿದ್ದಲ್ಲಿ ಅಂತಹ ಶಾಲೆಗೆ ಸೇರಿಸದಿರುವುದು ಉತ್ತಮ.

12. ಚಿಕ್ಕ ಮಕ್ಕಳಿಗೆ ಬಸ್‍ಗೆ ಕಳಿಸುವುದು ಆರೋಗ್ಯಕರ ಬೆಳವಣಿಗೆ ಆಗಲಾರದು. ಪ್ರತೀ ದಿನ ನೀವೇ ಕರೆದುಕೊಂಡು ಹೋಗಿ ಮಿಸ್ ಹತ್ತಿರ ಮಾತಾಡಿ ಬಿಟ್ಟು ಬಂದರೆ ಮಗು ಬೇಗಬೇಗನೆ ಕಲಿಯುವ ಅವಕಾಶಗಳಿರುತ್ತವೆ. ಅಂಥಹ ಒಂದು ಇಂಟಿಮೆಸಿಯನ್ನು ಶಿಕ್ಷಕರೊಂದಿಗೆ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ.

13. ಶಾಲೆಯ ಬಗ್ಗೆ ಏನಾದರೂ ಸಂದೇಹಗಳಿದ್ದರೆ ಹತ್ತಿರದ ಬಿ.ಇ.ಒ. ಕಛೇರಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆಯಬಹುದು.

14 ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಆದರೆ ಇನ್ನೂ ಉತ್ತಮ.

15. ಸಮುದ್ರ ಗರ್ಭದಲ್ಲಿ ಹುದುಗಿರುವ ಮುತ್ತುಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ. ಪರ್ವತಗಳಲ್ಲಿರುವ ಮಾಣ್ಯಿಕ್ಯವನ್ನು, ಭೂಗರ್ಭದಲ್ಲಿ ಇರುವ ಬಂಗಾರದ, ಕಲ್ಲಿದ್ದಲಿನ ಗಣಿಗಳನ್ನು ಕಂಡುಕೊಳ್ಳುತ್ತಿದ್ದೇವೆ. ಆದರೆ ಪ್ರತಿ ಮಗುವು ತನಗೆ ತಾನು ಆವಿಷ್ಕರಿಸಿಕೊಳ್ಳಲು ಈ ಪ್ರಪಂಚಕ್ಕೆ ಬರುವಾಗ ತನ್ನಲ್ಲಿರುವ ಸೃಜನಾತ್ಮಕ ಮೇಧಾಶಕ್ತಿಯನ್ನು ಕುರಿತು ನಾವು ಎಷ್ಟು ಮಾತ್ರಕ್ಕೂ ತಿಳಿದುಕೊಳ್ಳಲಾರದವರಾಗಿದ್ದೇವೆ. ಆದ್ದರಿಂದ ಶಾಲೆಗೆ ಸೇರಿಸಿದ ನಂತರ ಪಾಲಕರು ಅವಶ್ಯವಾಗಿ ಏನು ಮಾಡಬೇಕು, ಏನು ಮಾಡಬಾರದು
ಎಂಬುದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿಯಾವುದೇ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಫೋನ್ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಥವಾ ಫೆಸ್‍ಬುಕ್‍ನಲ್ಲಿ ದಾರುಕೇಶ ಬಿ.ಎಂ. ಎಂದು ಹುಡುಕಿದರೆ ವೀಡಿಯೋಗಳ ಲಭ್ಯತೆ ಇದೆ.  -ಬಿ.ಎಂ. ದಾರುಕೇಶ ಕೆ.ಇ.ಎಸ್, ಉಪನ್ಯಾಸಕರು, ದಾವಣಗೆರೆ. 9449454688.9886229378. daru.vision@gmail.com
ನೀವು ಮಕ್ಕಳ ಮೇಲಿಟ್ಟ್ಟ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸುವಾಗ ತೀರಾ ಲಕ್ಷಗಟ್ಟಲೆ ಡೊನೆಷನ್ ಸುರಿಯುವುದು ನಿಮಗೆ ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆಯೊ ಗೊತಿಲ್ಲ. ನಿಮ್ಮ ಬಳಿ ಹಣವಿದೆ ಕೊಡಿ. ನಮ್ಮದೇನೂ ಅಭ್ಯಂತರವಿಲ್ಲ. ಅದು ನಿಮ್ಮ ಅಲೋಚನಾ ವಿಧಾನದ ವಿವೇಚನೆಗೆ ಬಿಟ್ಟ ಪರಮಾಧಿಕಾರ. ಆದರೆ ಅದಕ್ಕೆ ನಿಮ್ಮ ಮಗುವಿನ ಮೇಲಿನ ಪ್ರೀತಿಯನ್ನು ಮಾತ್ರ ತಳುಕು ಹಾಕಬೇಡಿ ಎನ್ನುವುದಷ್ಟೇ ಈ ಲೇಖನದ ಉದ್ದೇಶ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin