ನಿಮ್ ಕಾಲಿಗೆ ಬೀಳ್ತೀನಿ ಕೆಲಸ ಮಾಡ್‍ಕೊಡ್ರೋ ಮಾರಾಯ

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmappa-Session

ಬೆಂಗಳೂರು, ಫೆ.7- ಇನ್ನೂ ಬಗರ್‍ಹುಕುಂ ಸಾಗುವಳಿದಾರರಿಗೆ ಚೀಟಿ ಸಿಗ್ತಿಲ್ಲ ಇದೊಂದ್ ಕೆಲ್ಸ ಮಾಡ್‍ಕೊಡ್ರೋ ಮಾರಾಯ…. ನಾನು ನಿಮ್ಮ ಕಾಲಿಗೆ ಬೀಳ್ತೀನಿ. ನಾನ್ ತಲೆತಗ್ಗಿಸುವಂತಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನಪರಿಷತ್‍ನಲ್ಲಿ ತಮ್ಮ ಅಸಹಾಯಕತೆ ಪ್ರದರ್ಶಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಎನ್. ಅಪ್ಪಾಜಿಗೌಡ ಅವರ ಪರವಾಗಿ ರಮೇಶ್ ಬಾಬು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್‍ಹುಕುಂ ಸಾಗುವಳಿದಾರರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ವಾರಕ್ಕೊಂದು ಸಭೆ ಕರೆಯುವಂತೆ ಶಾಸಕರಿಗೆ ಹೇಳಿದ್ದೇನೆ. ಸಭೆಗೆ ಎರಡು ಜನ ಬಂದರೂ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಸೂಚಿಸಿದ್ದೇನೆ. ಆದರೆ ಶಾಸಕರು ಸಭೆ ಕರೆಯಲ್ಲ ನಾನೇನ್ ಮಾಡ್ಲಿ… ಬದುಕಿನಲ್ಲಿ ಭೂಮಿಯೇ ಜನರಿಗೆ ಮಾರ್ಗದರ್ಶನ…  ಇದೊಂದ್ ಕೆಲ್ಸ ಮಾಡ್‍ಕೊಡ್ರೊ ಮಾರಾಯ… ನಿಮ್ ಕಾಲಿಗ್ ಬೀಳ್ತೀನಿ ಎಂದು ಸಚಿವರು ಹೇಳಿದರು.

ಬಗರ್‍ಹುಕುಂ ಸಾಗುವಳಿದಾರರು ಸಾಗುವಳಿ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇರುವುದು ನನ್ನ ಗಮನಕ್ಕೆ ಬಂದಿದೆ. ಅವುಗಳನ್ನು ಶೀಘ್ರ ವಿಲೇವಾರಿಯಾಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಸಭೆ ಕರೆದು ಅರ್ಜಿ ವಿಲೇವಾರಿ ಮಡಲು ತಹಶೀಲ್ದಾರ್‍ರಿಗೆ ಸೂಚಿಸಿದ್ದೇನೆ. ಆದರೆ ಕೆಲವೆಡೆ ತಹಶೀಲ್ದಾರರ ಸಭೆಗೆ ಜನಪ್ರತಿನಿಧೀಗಳೇ ಅಡ್ಡಿ ಮಾಡಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದರು.
ಮಂಡ್ಯ ಜಿಲ್ಲೆಯೊಂದರಲ್ಲೇ 25 ಸಾವಿರ ಅರ್ಜಿಗಳು ಬಾಕಿ ಇವೆ. ಗೋಮಾಳ ಜಮೀನುಗಳಲ್ಲಿ ರೈತರು ಅನಧಿಕೃತವಾಗ ಸಾಗುವಳಿ ಮಾಡುತ್ತಿರುವುದನ್ನು ಸಕ್ರಮ ಮಾಡುವ ಸಂಬಂಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪ್ರತಿ ಶನಿವಾರದಂದು ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಮುಂದೆ ಸಲ್ಲಿಸಿ ವಿಲೇವಾರಿ ಮಾಡಲು ಎಲ್ಲಾ ತಹಶೀಲ್ದಾರ್‍ರಿಗೆ ಸೂಚಿಸಿದ್ದೇನೆ.  ಈ ತಿಂಗಳಾಂತ್ಯದೊಳಗೆ ಈ ಕೆಲಸ ಮುಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin