ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ಚಾಲಕ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

gsdfahgafsdhfhಬೆಂಗಳೂರು, ಆ.5- ಚಾಲಕರ ನಿಯಂತ್ರಣ ತಪ್ಪಿ ಮಾರುತಿ ಕಾರು ಬೆಳ್ಳಂದೂರು ಕೆರೆಗೆ  ಉರುಳಿದರೂ ಆತ ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.ರಿತಿ ಸಿಂಗ್ ಪ್ರಾಣಾಪಾಯದಿಂದ ಪಾರಾಗಿರುವ ಕಾರು ಚಾಲಕ.ಬೆಳಗ್ಗೆ ರಿತಿ ಸಿಂಗ್ ವೇಗವಾಗಿ ಮಾರುತಿ 120 ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಬೆಳ್ಳಂದೂರು ಕೆರೆಗೆ  ಉರುಳಿತ್ತು.ತಕ್ಷಣ ಸ್ಥಳೀಯರು ಬಿಬಿಎಂಪಿಗೆ ಸುದ್ದಿ ಮುಟ್ಟಿಸಿದ್ದು, ಸಿಬ್ಬಂದಿ ಧಾವಿಸಿ ಕ್ರೇನ್ ಮೂಲಕ ಕಾರನ್ನು ಮೇಲೆತ್ತಿದ್ದಾರೆ.ಈ ಸಂಬಂಧ ಎಚ್‍ಎಸ್‍ಆರ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

 

Facebook Comments

Sri Raghav

Admin