ನಿಯಂತ್ರಣ ನದಿಗೆ ಉರುಳಿದ ಬಸ್ : 14 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Bus-Acci--02

ಕಠ್ಮಂಡು, ಅ.28-ಪ್ರಯಾಣಿಕರ ಬಸ್ಸೊಂದು ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದು 14 ಮಂದಿ ಮೃತಪಟ್ಟ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. 50 ಜನರಿದ್ದ ಬಸ್ ರಾಜಧಾನಿ ಕಠ್ಮಂಡುವಿನಿಂದ ರಾಜ್‍ಬಿರಾಜ್‍ಗೆ ಹೋಗುತ್ತಿತ್ತು. ಇಲ್ಲಿಂದ 80 ಕಿ.ಮೀ. ದೂರದಲ್ಲಿರುವ ಘಾಟ್‍ಬೆಸಿ ಬಂಗಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಉರುಳಿ ಬಿತ್ತು.

ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳೂ ಸೇರಿದಂತೆ 14 ಶವಗಳನ್ನು ನದಿಯಿಂದ ಹೊರಕ್ಕೆ ತೆಗೆಯಲಾಗಿದೆ. 15 ಪ್ರಯಾಣಿಕರು ಈಜಿ ಸುರಕ್ಷಿತವಾಗಿ ದಡ ಸೇರಿದರು. ಇವರಿಗೆ ಅಪಘಾತದಲ್ಲಿ ಗಾಯಗಳಾಗಿವೆ.

Facebook Comments

Sri Raghav

Admin