ನಿರಂಜನ್‍ಕುಮಾರ್ ನೇತೃತ್ವದಲ್ಲಿ  ಬೈಕ್ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಫೆ.13- ವೃತ್ತ ನಿರೀಕ್ಷಕ ನಿರಂಜನ್‍ಕುಮಾರ್ ನೇತೃತ್ವದಲ್ಲಿ ನಗರ ಠಾಣೆ ಪೊಲೀಸರು ಹೆಲ್ಮೇಟ್ ಧರಿಸಿ ದ್ವಿಚಕ್ರ ವಾಹನ ರ‍್ಯಾಲಿ ಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸುವ ಮೂಲಕ ಗಮನ ಸೆಳೆದು ಜಾಗೃತಿ ಮೂಡಿಸಿದರು.ನಗರ ಪೊಲೀಸ್ ಠಾಣೆಯಿಂದ ಹೊರಟ ಈ ಬೈಕ್ ರ್ಯಾಲಿ ರಾಷ್ಟ್ರೀಯ ಹೆದ್ದಾರಿ(206) ಟಿ.ಎಚ್.ರಸ್ತೆ ಸೇರಿದಂತೆ ಸಾಯಿನಾಥರಸ್ತೆ, ಶ್ಯಾನುಭೋಗರಬೀದಿ, ಕೆಂಡದಗುಂಡಿವೃತ್ತ, ಪೇಟೆಬೀದಿ ಹೀಗೇ ನಗರದ ಪ್ರಮುಖ ರಸ್ತೆಗಳಲ್ಲಿ ಹೆಲ್ಮೇಟ್ ಧರಿಸಿಯೇ ಇನ್ನೂ ನಗರದಲ್ಲಿ ಬೈಕ್ ಸವಾರಿ ಮಾಡಬೇಕೆಂಬ ಸಂದೇಶ ರವಾನಿಸಿದರು.ವೃತ್ತ ನಿರೀಕ್ಷಕ ನಿರಂಜನ್‍ಕುಮಾರ್ ಮಾತನಾಡಿ, ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ಡ್ರೈವ್ ಮಾಡಬೇಕೆಂಬ ನಿಯಮವಿದ್ದರು ಬಹುತೇಕ ವಾಹನ ಸವಾರರು ಇದನ್ನು ಪಾಲಿಸುತ್ತಿಲ್ಲ. ಈ ಸಂಬಂಧ ಇಲಾಖೆ ಹಲವು ಬಾರಿ ಸೂಚನೆ ನೀಡಿದೆ. ಅದನ್ನು ನಿರ್ಲಕ್ಷಿಸಿದವರಿಗೆ ದಂಡ ಸಹ ಹಾಕಲಾಗಿದೆ.

ಆದರೂ ಹೆಲ್ಮೆಟ್ ಧರಿಸದೆ ಸಂಚಾರಿ ನಿಯವ್ನ ಉಲ್ಲಂಘಿಸುತ್ತಿರುವುದರಿಂದ ಈ ರೀತಿ ವಿನೂತವಾಗಿ ಬೈಕ್ ರ್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಇದರಿಂದ ಆಕಸ್ಮಿಕ ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಗಂಗಾಧರ್‍ನಾಯಕ್, ಎಎಸ್‍ಐಗಳಾದ ಕೃಷ್ಣನಾಯಕ್, ಭೀಮಾನಾಯಕ್, ಗೋಪಾಲ್ ಹಾಗೂ ಇತರೆ ಪೊಲಿಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin