ನಿರಾತಂಕವಾಗಿ ನಡೆಯಿತು ಮೈಸೂರು ದಸರಾ, ಅಭೂತಪೂರ್ವವಾಗಿತ್ತು ಜಂಬೂ ಸವಾರಿ

ಈ ಸುದ್ದಿಯನ್ನು ಶೇರ್ ಮಾಡಿ

d5

ಮೈಸೂರು, ಅ.12-ಇತ್ತೀಚೆಗೆ ರಾಜ್ಯ ಹಾಗೂ ನಗರದಲ್ಲಿ ನಡೆದ ವಿದ್ಯಮಾನಗಳಿಂದಾಗಿ ಈ ಬಾರಿಯ ಮೈಸೂರು ದಸರಾ ಹೇಗೋ, ಏನೋ ಎಂಬ ಅನುಮಾನಗಳ ನಡುವೆ ಯಶಸ್ವಿಯಾಗಿ ನಡೆದಿದೆ. ರಾಜ್ಯಾದ್ಯಂತ ಭುಗಿಲೆದ್ದಿದ್ದ ಕಾವೇರಿ ವಿವಾದ ಹಾಗೂ ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವದ ಮೇಲೆ ಆತಂಕದ ಛಾಯೆ ಕವಿದಿತ್ತು. ಇದಕ್ಕೆ ಪುಷ್ಟೀಕರಿಸುವಂತೆ ಮಹಾಲಯ ಅಮಾವಾಸ್ಯೆ ನಂತರ ಆರಂಭವಾದ ನವರಾತ್ರಿ ಸಂದರ್ಭದಲ್ಲೂ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಸಾಕಷ್ಟು ಕ್ಷೀಣಿಸಿತ್ತು. ಮೂರ್ನಾಲ್ಕು ದಿನ ಕಳೆದರೂ ಇತ್ತ ಪ್ರವಾಸಿಗರು ಮುಖ ಮಾಡಿರಲಿಲ್ಲ. ಹಲವು ಹೊಟೇಲ್‍ಗಳಲ್ಲಿ ಮೊದಲೇ ಕಾಯ್ದಿರಿಸಲಾಗಿದ್ದ ಕೊಠಡಿಗಳೂ ಸಹ ಈ ಕಾರಣದಿಂದಾಗಿ ರದ್ದಾಗಿತ್ತು.

ಹಾಗಾಗಿ ಜಂಬೂ ಸವಾರಿಯಂದು ಜನ ಸೇರುತ್ತಾರೋ, ಇಲ್ಲವೋ ಎಂಬುದು ಒಂದೆಡೆಯಾದರೆ, ಕಾವೇರಿ ವಿವಾದ ಮತ್ತಷ್ಟು ಬಿಗಾಡಯಿಸಿದರೆ ಪ್ರತಿಭಟನೆಗಳು ನಡೆದು ತೊಂದರೆಯಾಗಬಹುದೇನೋ ಎಂಬ ವಿಚಾರವೂ ಮೈಸೂರಿನಿಂದ ಪ್ರವಾಸಿಗರನ್ನು ದೂರವಿರಿಸಿತ್ತು. ಆದರೆ ಇವೆಲ್ಲವನ್ನೂ ಮೀರಿ ನಿನ್ನೆ ನಡೆದ ಜಂಬೂ ಸವಾರಿಗೆ ಅತ್ಯಧಿಕ ಮಂದಿ ಪ್ರವಾಸಿಗರು ಪಾಲ್ಗೊಂಡು ಅಭೂತಪೂರ್ವ ಯಶಸ್ಸು ಕಂಡಿದೆ. ನಿನ್ನೆ ನಡೆದ ಜಂಬೂ ಸವಾರಿ ಮೆರವಣಿಗೆ, ಪಂಜಿನ ಕವಾಯತು ಯಶಸ್ವಿಯಾಗಿದೆ. ಇದರಿಂದ ಈ ಹಿಂದೆ ಉಂಟಾಗಿದ್ದ ಆತಂಕವೂ ದೂರಾಗಿದೆ.

ಅಕ್ಟೋಬರ್ 1 ರಂದು ಚಾಮುಂಡಿ ಬೆಟ್ಟದಲ್ಲಿ ನಾಡೋಜ ಚನ್ನವೀರ ಕಣವಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು. ಈ ಬಾರಿ 11 ದಿನಗಳ ಕಾಲ ನಡೆದ ದಸರಾ ಕಾರ್ಯಕ್ರಮಗಳಲ್ಲಿ ಆಹಾರ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಅತಿ ಹೆಚ್ಚು ಜನ ಮನ್ನಣೆ ಪಡೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin