ನಿರ್ಣಾಯಕ ಕಾವೇರಿ ಐತೀರ್ಪುನ್ನು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Supre-Court-Judgement

ನವದೆಹಲಿ, ಅ.19-ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ಮೂರು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದಿದ್ದು ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಮುಂದಿನ ಆದೇಶದವರೆಗೆ ಈಗಾಗಲೇ ನಿರ್ದೇಶಿಸಿರುವಂತೆ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಸೂಚನೆ ಕೊಟ್ಟಿದೆ. ಬುಧವಾರ ಮುಂದುವರೆದ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠಗಳ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಖಿಲ್ವಲ್ಕರ್ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿದೆ. ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಅತ್ಯಂತ ನಿರ್ಣಾಯಕವಾಗಲಿದೆ. ನ್ಯಾಯಮಂಡಳಿ ರಚನೆ ಮಾಡುವ ಅಧಿಕಾರ ಸಂಸತ್ತಿಗೆ ಹೊರತುಪಡಿಸಿದರೆ ನ್ಯಾಯಾಲಯಕ್ಕೆ ಸೂಚನೆ ನೀಡುವ ಅಧಿಕಾರವಿಲ್ಲ ಎಂಬ ತನ್ನ ವಾದವನ್ನು ಕರ್ನಾಟಕ ಪರ ವಕೀಲ ನಾರಿಮನ್ ನ್ಯಾಯಾಲಯದ ಗಮನಕ್ಕೆ ಮನವರಿಕೆ ಮಾಡಿಕೊಟ್ಟರು.

ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ಪರಿಹಾರವಾಗದಿದ್ದ ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ನ್ಯಾಯಮಂಡಲಿ ರಚನೆ ಮಾಡುವಂತೆ ಸಂಸತ್‍ಗೆ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಂಗಕ್ಕಿಲ್ಲ. ಇದು ಸಂಸತ್ತಿನ ಪರಮೋಚ್ಛ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ ಎಂದು ನಾರಿಮನ್ ಹೇಳಿದರು. ಆದರೆ ಕರ್ನಾಟಕದ ವಾದವನ್ನು ಒಪ್ಪದ ತಮಿಳುನಾಡು ಪರ ವಕೀಲ ಶೇಖರ್ ನಪಾಡೆ ಮೂರೂ ರಾಜ್ಯಗಳ ನಡುವೆ ಅನೇಕ ದಶಕಗಳಿಂದ ನದಿ ನೀರು ಹಂಚಿಕೆ ವಿವಾದ ಪರಿಹಾರವಾಗಿಲ್ಲ. ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಯಾರೊಬ್ಬರೂ ಒಪ್ಪಿಕೊಂಡಿಯೂ ಇಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಗಿರುವ ಪರಮಾಧಿಕಾರ ಬಳಸಿಕೊಂಡು ಸಂಸತ್‍ಗೆ ನಿರ್ವಹಣಾ ಮಂಡಳಿ ರಚನೆ ಮಾಡಲು ನಿರ್ದೇಶನ ನೀಡಬಹುದು. ಈ ಹಿಂದೆ ಪಂಜಾಬ್‍ನ ಸತ್ಲೇಸ್ ಮತ್ತು ಬಿಯಾಸ್ ನದಿ ನೀರು ಹಂಚಿಕೆ ವಿವಾದ ಇದೇ ರೀತಿ ವಿವಾದ ಉಂಟಾದಾಗ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿತ್ತು. ಈ ಮಾನದಂಡವನ್ನೇ ಅನುಸರಿಸಿ ಕಾವೇರಿ ವಿವಾದವನ್ನು ಪರಿಹರಿಸುವಂತೆ ಶೇಖರ್ ನಪಾಡೆ ಮನವಿ ಮಾಡಿದರು. ಇನ್ನು ಕೇರಳ ಪರ ವಕೀಲರು ಕೂಡ ನ್ಯಾಯಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದರು.
ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯ ಮಂಡಳಿ ರಚನೆಯಾದರೆ ರಾಜ್ಯ ಸರ್ಕಾರದ ಅಧಿಕಾರವನ್ನೇ ಕಿತ್ತುಕೊಂಡಂತಾಗುತ್ತದೆ. ಮುಂದೆ ಇಂದು ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಬಿಕ್ಕಟ್ಟಿಗೆ ಕಾರಣವಾಗಬಹುದು. ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವಂತೆ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆ ಸ್ಪಷ್ಟ ಬಹುಮತದ ಮೂಲಕ ಅಂಗೀಕಾರವಾಗಬೇಕು.

ಏಕಾಏಕಿ ನ್ಯಾಯಮಂಡಳಿ ರಚನೆ ಮಾಡುವಂತೆ ಆದೇಶ ನೀಡಿದರೆ ರಾಜ್ಯ ಸರ್ಕಾರಗಳ ಅಧಿಕಾರವೇ ಮೊಟಕುಗೊಳ್ಳುತ್ತದೆ. ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿರುವಂತೆ ನ್ಯಾಯಮಂಡಳಿ ರಚನೆಗೆ ಇನ್ನು ಸಾಕಷ್ಟು ಸಮಯಾವಕಾಶ ಬೇಕು. ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಹೀಗಾಗಿ ತಮಿಳುನಾಡಿನ ವಾದವೇ ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ಮೂರು ರಾಜ್ಯಗಳ ನ್ಯಾಯಮಂಡಳಿ ತೀರ್ಪನ್ನು ಪ್ರಶ್ನಿಸಿರುವುದು ಹಾಗೂ ನಿರ್ವಹಣಾ ಮಂಡಳಿ ರಚನೆಗೆ ಪರ-ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸುವುದಾಗಿ ಪ್ರಕಟಿಸಿತು.

► Follow us on –  Facebook / Twitter  / Google+

Facebook Comments

Sri Raghav

Admin