ಮ್ಯಾಜಿಕ್ ಮಾಡಿದ ಚಾಹಲ್ : ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು, ಸರಣಿ ಕೈವಶ

ಈ ಸುದ್ದಿಯನ್ನು ಶೇರ್ ಮಾಡಿ

Chahal

ಬೆಂಗಳೂರು. ಫೆ.01 : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಿ.20 ಸರಣಿಯ 3ನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ 75 ರನ್ ಗಳ ಜಯ ಸಾಧಿಸಿ 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಯುಜ್ವೆಂದ್ರ ಚಾಹಲ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಸೊಲೊಪ್ಪೊಕೊಂಡಿತು. 25 ರನ್ ನೀಡಿ 6 ವಿಕೆಟ್ ಗಳಿಸಿದ ಚಾಹಲ್ ಭಾರತಕ್ಕೆ ಗೆಲುವಿನ ರುವಾರಿಯೆನಿಸದರು.

ಈ ಮೊದಲು ಟಾಸ್ ಸೋತು ಮೊದಲು ಬ್ಯಾಂಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 202 ರನ್ ಗಳಿಸಿ ಎದುರಾಳಿ ಇಂಗ್ಲೆಂಡ್ ಗೆ 203 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.  ಭಾರತ ಉತ್ತಮ ಆರಂಭ ಪಡೆಯದಿದ್ದರೂ ರೈನಾ(63) ಮತ್ತು ಧೋನಿ(56) ಜೊತೆಯಾಟ ಉತ್ತಮ ಮೊತ್ತವನ್ನು ಕಲೆಹಾಕುವಲ್ಲಿ ಸಫಲರಾದರು.  ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ 45 ಎಸೆತಗಳಲ್ಲಿ ಭರ್ಜರಿ 5 ಸಿಕ್ಸರ್, 2 ಬೌಂಡರಿಯೊಂದಿಗೆ 63 ರನ್ ಗಳಿಸಿ ಔಟಾದರು. ಮಾಜಿ ನಾಯಕ ಎಂಎಸ್ ಧೋನಿ ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು.

ಈ ಮೊದಲು ಬ್ಯಾಟ್ ಮಾಡಿದ ನಾಯಕ ಕೊಹ್ಲಿ 2 ರನ್ ಗಳಿಸಿ ಔಟಾದರೆ, ಭರವಸೆಯ ಆಟಗಾರ ರಾಹುಲ್ 22 ರನ್ ಗಳಿಸಿ ಔಟಾದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟು ರೈನಾ ಔಟಾದ ಮೇಲೆ ಬಂದ ಯುವರಾಜ್ ಸಿಂಗ ಬಿರುಸಿನ ಆಟವಾಡಲು ಮುಂದಾಗಿ 27 ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ನಂತರ ಬಂದ ರಿಷಬ್ ಪಂಥ್ (6), ಹಾರ್ಧಿಕ್ ಪಂದ್ಯ 11 ಗಳಿಸಿದರು. ಕೊನೆಗೆ ಭಾರತ 202 ರನ್ ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೊದಲು ಟಾಸ್ ಗೆದ್ದಿದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತ್ತು. ಇಂಗ್ಲೆಂಡ್ ಪರ ತೈಮೂರ್ ಮಿಲ್ಸ್, ಕ್ರಿಸ್ ಜೋರ್ಡಾನ್, ಬೆನ್ ಸ್ಟೋಕ್ಸ್ ಮತ್ತು ಪ್ಲುನ್ಕೇಟ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ :
ಭಾರತ : 202/6 (20/20 ov)
ಇಂಗ್ಲೆಂಡ್ : 127 (16.3/20 ov)

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Rain--01

Facebook Comments

Sri Raghav

Admin