ನಿರ್ದೇಶಕ ಎಸ್.ನಾರಾಯಣ್ ಅವರ ತೋಟದ ಮನೆಗೆ ನುಗ್ಗಿದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ
Cheeta-sdgsafh
ಸಾಂಧರ್ಭಿಕ ಚಿತ್ರ

ಶಿವಗಂಗೆ, ಡಿ.30- ಚಿತ್ರ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ತೋಟದ ಮನೆಗೆ ಚಿರತೆ ನುಗ್ಗಿ 20ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ನಾಯಿಗಳನ್ನು ಗಾಯಗೊಳಿಸಿರುವುದರಿಂದ ತೋಟದಲ್ಲಿದ್ದವರು ಆತಂಕಕ್ಕೊಳಗಾಗಿದ್ದಾರೆ. ಸುಮಾರು 12 ಅಡಿ ಎತ್ತರದ ಕಾಂಪೌಂಡ್ ಎಗರಿ ಹಾರಿಬಂದ ಚಿರತೆ ನಾಯಿಗಳ ಮೇಲೆ ದಾಳಿ ನಡೆಸಿ ಕೋಳಿಗಳನ್ನು ತಿಂದು ಮುಗಿಸಿದೆ.  ತೋಟದಲ್ಲಿದ್ದವರು ಭಯಭೀತರಾಗಿದ್ದಾರೆ. ರಾತ್ರೋರಾತ್ರಿ ಕಾಡು ಪ್ರಾಣಿಗಳ ಹಾವಳಿಯಿಂದ ತೋಟದಲ್ಲಿದ್ದ ಕುಟುಂಬದವರು ಭೀತಿಗೊಳಗಾಗಿದ್ದು, ನಾರಾಯಣ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ನಾರಾಯಣ್ ಅವರು ಸ್ಥಳೀಯ ಶಾಸಕರಾದ ಎಸ್.ಶ್ರೀನಿವಾಸಮೂರ್ತಿಯವರ ಗಮನಕ್ಕೆ ಈ ವಿಷಯ ತಂದಿದ್ದು, ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಳೆದ 15 ದಿನಗಳ ಹಿಂದೆ ಸುಮಾರು ಐದು ಆನೆಗಳು ಈ ತೋಟದ ಸುತ್ತ ಇದ್ದ ಕಾಂಪೌಂಡ್ ಒಡೆದು ತೋಟಕ್ಕೆ ನುಗ್ಗಿದ್ದವು. ಈ ಸಂದರ್ಭದಲ್ಲಿಯೇ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಗಿತ್ತು. ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿರಲಿಲ್ಲ. ಕಾಂಪೌಂಡ್‍ನ್ನು ಮತ್ತೆ ಸರಿಪಡಿಸಲಾಗಿತ್ತು. ಕಳೆದ ಮೂರು ದಿನಗಳ ಹಿಂದಷ್ಟೇ ಮತ್ತೆ ನಾಲ್ಕು ಆನೆಗಳು ನುಗ್ಗಿ ಕಾಂಪೌಂಡ್ ಒಡೆದು ಹಾಕಿ ದಾಂಧಲೆ ನಡೆಸಿವೆ. ಈಗ ಚಿರತೆ ಹಾವಳಿ ಶುರುವಾಗಿದೆ. ನಮ್ಮ ತೋಟದ ಮನೆಗೆ ಕಾಂಪೌಂಡ್ ಇದೆ. ನಾಯಿಗಳ ಕಾವಲಿದೆ. ಆದರೆ, ಸುತ್ತಮುತ್ತ ಇರುವ ಜನರಿಗೆ ಯಾವ ರಕ್ಷಣೆಯೂ ಇಲ್ಲ. ಏಕಾಏಕಿ ಆನೆಗಳು ನುಗ್ಗಿದರೆ ಆ ಜನ ಏನು ಮಾಡಬೇಕು ಎಂದು ಎಸ್.ನಾರಾಯಣ್ ಅವರು ಈ ಸಂಜೆಯೊಂದಿಗೆ ತಮ್ಮ ಆತಂಕ ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕರು ಈ ವಿಷಯದ ಬಗ್ಗೆ ಕಾಳಜಿ ವಹಿಸಿದ್ದರಾದರೂ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಹಳ್ಳಿಗಳಿಗೆ ದಾಳಿ ಇಡುತ್ತಿರುವ ಆನೆಗಳು, ಕಾಡು ಪ್ರಾಣಿಗಳನ್ನು ಕಾಡಿಗೆ ಹಿಂದಿರುಗಿಸಬೇಕು.ಜನರನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin