ನಿರ್ಲಕ್ಷ ತೋರಿರುವ ಪರಮೇಶ್ವರ್ ರಾಜೀನಾಮೆಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

param

ತುಮಕೂರು.ಫೆ.17:-ಕಾರ್ಯಕರ್ತರ ಮದುವೆಗೆ ಬಂದು ಹೋಗುವ ಗೃಹ ಸಚಿವರು,ಸವರ್ಣೀಯರ ದೌರ್ಜನ್ಯದಿಂದ ಆಸ್ಪತ್ರೆ ಸೇರಿರುವ ದಲಿತ ಯುವಕನನ್ನು ಭೇಟಿ ಮಾಡದೇ ನಿರ್ಲಕ್ಷ ತೋರಿರುವ ಡಾ.ಜಿ.ಪರಮೇಶ್ವರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಾಹಿತಿ ಕೆ.ಬಿ.ಸಿದ್ದಯ್ಯ ಒತ್ತಾಯಿಸಿದ್ದಾರೆ.ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಯೋಜಿಸಿದ್ದ ಮಾನವತಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಗುಬ್ಬಿ ಅಭಿಷೇಕ ಪ್ರಕರಣದ ಆರೋಪಿಯೊಬ್ಬನಿಗೆ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬಂದ ಗುಬ್ಬಿ ಶಾಸಕರ ವಿರುದ್ದ ನಮ್ಮ ಹೋರಾಟ ತೀವ್ರಗೊಳ್ಳಬೇಕು ಎಂದರು.ಎಸ್ಡಿಪಿಐ ಮುಖಂಡ ಮಹಮದ್ ರಿಯಾಜ್ ಮಾತನಾಡಿ, ದಿನೇ ದಿನೇ ದಲಿತರು,ಅಲ್ಪಸಂಖ್ಯಾತರು,ಶೋಷಿತರು ಪರಕೀಯರಾಗುತ್ತಿದ್ದಾರೆ. ಜಾತಿವಾದಿ ಮನಸ್ಥಿತಿಯ ಶವಪೆಟ್ಟಿಗೆಗೆ ಕೊನೆಯ ಮೊಳೆಗಳನ್ನು ಹೊಡೆಯಬೇಕಿದೆ ಎಂದರು.ಈ ದೇಶದಲ್ಲಿ ದಲಿತರ,ಮಹಿಳೆಯರ,ಅದಿವಾಸಿಗಳ ಮೇಲಿನ ಸೌರ್ಜನ್ಯ ತಡೆಯಲು, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ,ಬೇಟಿ ಬಚಾವ್ ಆಂದೋಲನಗಳು ಕೆಲಸಕ್ಕೆ ಬರುತ್ತಿಲ್ಲ ಎಂದು ವಿವರಿಸಿದರು.ಸಮಾವೇಶದ ರೀತಿಯ ಪ್ರಯತ್ನಗಳು ಬಲಗೊಳ್ಳಬೇಕು.ನಮ್ಮ ನ್ಯಾಯಾಲಯಗಳೂ ಕೂಡಾ ಬೇಕಾದಾಗ ಬಡ್ತಿ ಮೀಸಲಾತಿ ರದ್ದು ಮಾಡುತ್ತದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin