ನಿವಾಸಿಗಳು ಪುರಸಭೆ ಕಚೇರಿ ಮುಂದೆ ಖಾಲಿಕೊಡ ಹಿಡಿದು ಪ್ರತಿಭಟನೆ 

ಈ ಸುದ್ದಿಯನ್ನು ಶೇರ್ ಮಾಡಿ

malavali

ಮಳವಳ್ಳಿ, ಫೆ.8- ಪಟ್ಟಣದಲ್ಲಿ 10 ಮತ್ತು 11ರಂದು ಸಿಡಿ ಹಬ್ಬಯಿದ್ದರೂ ಕುಡಿಯುವ ನೀರು ಪೂರೈಕೆಯಾಗಿಲ್ಲ ಮತ್ತು ಚರಂಡಿಯ ಕಸವನ್ನು ತೆಗೆದಿಲ್ಲ ಎಂದು ಆರೋಪಿಸಿ 7ನೇ ವಾರ್ಡ್‍ನ ನಿವಾಸಿಗಳು ಪುರಸಭೆ ಕಚೇರಿ ಮುಂದೆ ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿದರು.ಪಟ್ಟಣದ 7ನೇ ವಾರ್ಡ್‍ನಲ್ಲಿ ವಾರದಿಂದ ಕುಡಿಯುವ ನೀರು ಸಮಸ್ಯೆ ಬಗ್ಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾರ್ಡ್‍ನ ಕೆಲವು ನಿವಾಸಿಗಳು ದೂರಿದರು.ಶಂಕುತಲಾ ಮಾತನಾಡಿ, ನೀರು ಪೂರೈಕೆಯಾಗದಿರುವ ಬಗ್ಗೆ ವಾರ್ಡ್‍ನ ಸದಸ್ಯರಾಗಲಿ, ಅಧಿಕಾರಿಗಳಾಲಿ ಗಮನ ನೀಡಿಲ್ಲ. ಇದರಿಂದ ನಮ್ಮ ಸಮಸ್ಯೆ ಕೇಳುವವರಿಲ್ಲದಂತಾಗಿದೆ ಅಲ್ಲದೆ ಸ್ವಚ್ಛತೆಯೂ ಮರೀಚಿಕೆಯಾಗಿದೆ ,ಬೀದಿ ದೀಪಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ಧಳಕ್ಕೆ ಅಧಿಕಾರಿಗಳು ಬೇಟಿನೀಡಿ ಸಮಸ್ಯೆ ಬಗ್ಗೆಹರಿಸಬೇಕು ಅಲ್ಲಿವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸ್ಧಳಕ್ಕೆ ಬಂದ ಪುರಸಭೆ ಸದಸ್ಯರಾದ ನಾಗೇಶ್, ಉಮೇಶ್, ಗಂಗರಾಜೇಅರಸ್ ಮೊದಲದವರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವ ಯತ್ನ ನಡೆಸಿ ವಿಫಲರಾದರು.ವಿಷಯ ತಿಳಿದು ಸ್ಧಳಕ್ಕೆ ಬಂದ ಮುಖ್ಯಾಧಿಕಾರಿ ಶಿವಪ್ಪ ಧಾವಿಸಿ ಕೊಡಲೇ ನಿಮ್ಮ ವಾರ್ಡ್‍ಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಈಗಾಗಲೇ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಹಬ್ಬದೊಳಗೆ ಬಗೆಹರಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin