ನಿವೃತ್ತ ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ : ಬೆಳಗಾವಿ ಮಾಜಿ ಮೇಯರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Belagavi-Meyor

ಬೆಳಗಾವಿ, ಏ.17- ನಿವೃತ್ತ ಡಿವೈಎಸ್ಪಿ ಅವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಮಾಜಿ ಮೇಯರ್ ಶಿವಾಜಿ ಸುಂಟ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದ ಕಲಬುರ್ಗಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಿವೃತ್ತ ಡಿವೈಎಸ್ಪಿ ಪಿ.ಸದಾನಂದ ಪಡೋಲ್ಕರ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಪೊಲೀಸರು ಮಾಜಿ ಮೇಯರ್‍ರನ್ನು ಬಂಧಿಸಿದ್ದಾರೆ.ಕಳೆದ ಶನಿವಾರ ವಾಯುವಿಹಾರದಲ್ಲಿದ್ದ ನಿವೃತ್ತ ಡಿವೈಎಸ್ಪಿ ಅವರೊಂದಿಗೆ ಕೆಲವರು ಅನುಚಿತವಾಗಿ ವರ್ತಿಸುತ್ತಿದ್ದು, ಇದೇ ಕಾರಣಕ್ಕೆ ಪಡೋಲ್ಕರ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.   ತಡರಾತ್ರಿ ಎಸಿಪಿ ಶಿವಕುಮಾರ್, ಇನ್ಸ್‍ಪೆಕ್ಟರ್ ಕೇಶವ ತೆಂಗಿಕಾರ್ ನೇತೃತ್ವದ ತಂಡ ಸುಂಟ್ಕರ್ ಅವರನ್ನು ಬಂಧಿಸಿ ನ್ಯಾಯಾಲಯದ ಮೇಲೆ ಹಾಜರು ಪಡಿಸಿದಾಗ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin