ನಿವೃತ್ತ ಶಿಕ್ಷಕರಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

belagam-00

ಧಾರವಾಡ,ಸೆ.7- ಶಿಕ್ಷಕ ದೇವರಿಗೆ ಸಮಾನ ಎಂದು ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಹೇಳಲಾಗಿದೆ. ಮಕ್ಕಳಲ್ಲಿ ಅಡಗಿರುವ ಕ್ರಿಯಾತ್ಮಕ ಶಕ್ತಿಯನ್ನು ಗುರುತಿಸಿ, ಅವರನ್ನು ಒಳ್ಳೆಯ ಸುಸಂಸ್ಕೃತ ರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಅಂಜುಮನ್ ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಾಮಟಗಾರ ಕರೆ ನೀಡಿದರು.ಸಂಸ್ಥೆಯ ಸಭಾಭವನದಲ್ಲಿ ನಿವೃತ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಾವುದೇ ಜತಿ, ಮತ, ಪಂಥ, ಗಂಡು, ಹೆಣ್ಣು ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜ ಸುಧಾರಣೆ ಆಗಲು ಸಾಧ್ಯ ಎಂದ ಅವರು ಪಠ್ಯ ಹಾಗೂ ಪಠ್ಯೇತರ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ 10 ವಿದ್ಯಾರ್ಥಿಗಳನ್ನು ಗುರುತಿಸಿ ನಮಗೆ ತಿಳಿಸಿ, ಅವರ ಸರ್ವಾಂಗೀಣ ಅಭಿವೃಧ್ಧಿಗಾಗಿ ಸಂಸ್ಥೆಯು ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧ ಎಂದು ನುಡಿದರು.ಅತಿಥಿ ನಾಸೀರ ಹುಸೇನ್ ಮನಿಯಾರ ಮಾತನಾಡಿ ತಂದೆ ತಾಯಿಯ ನಂತರ ಅವರ ಜೀವನದ ಅತ್ಯುನ್ನತ ಸಾಧನೆಗೆ ಗುರುಗಳೇ ಕಾರಣ. ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದೇ ಸಂಸ್ಥೆಯ ಗುರಿಯಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಡಾ|| ಎಂ.ಎಂ. ಬಂಕಾಪೂರ, ಎಫ್.ಎಸ್. ಪರಮ ಣ್ಣವರ, ಎಂ.ಕೆ. ಕರ್ನಾಚಿ, ಬಿ.ಡಿ. ಕುರಕುರಿ, ಪ್ರೊ . ಶ್ರೀಮತಿ ಟಿ.ಎಚ್. ಕರ್ನಾಚಿ, ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ಝೆಡ್.ಡಿ. ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಿಕ್ಷಣ ಸಮಿತಿ ಸದಸ್ಯರಾದ ಎಸ್.ಎಸ್. ಸೌದಾಗರ, ಇಜಜ ಮುಲ್ಲಾ, ಎ.ಎಮ್. ಜಮಾದಾರ ಉಪಸ್ಥಿತರಿದ್ದರು. ಪ್ರಾರ್ಥನೆ ಜೈನಬ್ ಅತ್ತಾರ, ಬಶಿರಾ ಖಾಜಿ, ಕಾರ್ಯಕ್ರಮ ನಿರೂಪಣೆ ಎನ್. ಜಿ ವಿಜಪೂರ, ಸ್ವಾಗತ ಅಲ್ ಅಝೀಜ್ ದಾಸನಕೊಪ್ಪ, ವಂದನಾರ್ಪಣೆ ರಫೀಕ ಅಹಮದ್ ಶಿರಹಟ್ಟಿ.

 

► Follow us on –  Facebook / Twitter  / Google+

Facebook Comments

Sri Raghav

Admin