ನಿವೇಶನ ವಿಚಾರವಾಗಿ ವಾಗ್ವಾದ : ಸಭೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

kaduru

ಕಡೂರು, ಆ.31- ತಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸೇಂದಿ ವನವನ್ನು ನಿವೇಶನ ರಹಿತರಿಗೆ ನೀಡುವ ವಿಚಾರವಾಗಿ ಪರ-ವಿರೋಧ ವಾಗ್ವಾದಿಂದ ಗ್ರಾಮ ಸಭೆ ಅಧ್ಯಕ್ಷ ಟಿ.ಟಿ. ಶ್ರೀನಿವಾಸ್ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಕರೆದಿದ್ದ ತಾಲೂಕಿನ ತಂಗಲಿ ಗ್ರಾಪಂ ಗ್ರಾಮ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಗಂಗಾಧರನಾಯಕ್ ತಂಗಲಿ ಗ್ರಾಮದಲ್ಲಿರುವ ಸೇಂದಿವನದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ಇದಕ್ಕಾಗಿ ನಿವೇಶನ ರಹಿತರಿಂದ ಅರ್ಜಿ ಪಡೆಯುವಂತೆ ತಿಳಿಸಿದರು.
ಇವರು ಈ ವಿಷಯ ಮಂಡಿಸುತ್ತಿದ್ದಂತೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಗಣೇಶ್, ಸರ್ವೆ ನಂಬರ್ 245 ರಲ್ಲಿ 7 ಎಕರೆ 34 ಗುಂಟೆ ಸೇಂದಿವನದ ಜಾಗವಿದೆ, ಈ ಜಾಗವನ್ನು ರಾಜಕೀಯ ಲಾಭಕ್ಕಾಗಿ ಕೆಲವರಿಗೆ ನೀಡದಂತೆ ಆಗ್ರಹಿಸಿದರು.ಈ ಸಮಯದಲ್ಲಿ ವಾಗ್ವಾದ ನಡೆದರಿಂದ ಅಧ್ಯಕ್ಷ ಟಿ.ಟಿ. ಶ್ರೀನಿವಾಸ್ ವಿವಾದದ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡುವುದಾಗಿ ತಿಳಿಸಿ ಹೊರ ನಡೆದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಿಚಾರ ಕಂದಾಯ ಇಲಾಖೆಗೆ ಕಳುಹಿಸಲಾಗುವುದು, ಸರ್ಕಾರದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ನಂತರ ಸದಸ್ಯ ಗಂಗಾಧರನಾಯ್ಕ್ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ನೀಡಲು ಪಟ್ಟಿ ತಯಾರಿಸುವ ಉದ್ದೇಶದಿಂದ ಗ್ರಾಮ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ ಕೆಲವರು ಗೋಮಾಳಕ್ಕಾಗಿ ಆಗ್ರಹಿಸಿದ್ದಾರೆ, ನಮ್ಮ ಉದ್ದೇಶ ಎಲ್ಲಾ ಜನಾಂಗದ ಸ್ಥಳೀಯ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿದೆ, ಈ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆಸಲ್ಲಿಸಲಾಗುವುದು ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್. ಅರುಂಧತಿ, ತಾಪಂ ಸದಸ್ಯೆ ಸವಿತಾ ಆನಂದ್ (ಡೈರಿ), ಉಪಾಧ್ಯಕ್ಷೆ ಆರ್. ರಜಿನಿ, ಸದಸ್ಯರುಗಳಾದ ಧನಪಾಲ್‍ನಾಯ್ಕ, ಪೂರ್ಣಿಮಾಬಾಯಿ, ಲೋಕೇಶ್, ಶಮೀಮ್, ಪವಿತ್ರ, ಹನುಮಂತರಾಜ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin