ನಿಶ್ಚಿತಾರ್ಥದ ಸುದ್ದಿ ಶುದ್ಧ ಸುಳ್ಳು ಎಂದ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

KOhli
ನವದೆಹಲಿ, ಡಿ.30- ಹೊಸ ವರ್ಷದ ದಿನದಂದೇ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾಶರ್ಮಾ ಅವರ ನಿಶ್ಚಿತಾರ್ಥ ನಡೆಯುತ್ತದೆ ಎಂದು ಹರಡಿದ ಸುದ್ದಿಗೆ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.  ನಾನು ಹಾಗೂ ಅನುಷ್ಕಾ ಹೊಸ ವರ್ಷದ ಸಲುವಾಗಿ ಒಟ್ಟಿಗೆ ಕಾಲ ಕಳೆಯುತ್ತಿವೆಯೇ ಹೊರತು ನಾವು ಜನವರಿ 1 ರಂದು ಹೃಷಿಕೇಶ್‍ನ ನರೇಂದ್ರ ನಗರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ ಎಂದು ಮಾಧ್ಯಮಗಳು ಬಿಂಬಿಸಿರುವುದು ಸರಿಯಲ್ಲ ಎಂದರು.  ಕೆಲವು ಸುದ್ದಿಮಾಧ್ಯಮಗಳು ತಮ್ಮ ಚಾನೆಲ್‍ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಇಂತಹ ರೂಮರ್ ಮತ್ತು ಗಾಳಿ ಸುದ್ದಿಗಳನ್ನು ಪ್ರಕಟಿಸಿವೆ ಹೊರತು ನಾನು ಹಾಗೂ ವಿರಾಟ್ ಈಗಲೇ ನಿಶ್ಚಿತಾರ್ಥ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿಲ್ಲ ಎಂದು ಅನುಷ್ಕಾ ಕೂಡ ಸ್ಪಷ್ಟ ಮಾಹಿತಿ ನೀಡಿದ್ದಾರೆ.  ಅಲ್ಲದೆ ಅನುಷ್ಕಾಳ ಅಜ್ಜಿ ಉರ್ಮಿಳಾ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದು ವಿರಾಟ್ ಒಬ್ಬ ಒಳ್ಳೆಯ ಹುಡುಗ, ಆದರೆ ಅನುಷ್ಕಾಳೊಂದಿಗೆ ಆತನ ನಿಶ್ಚಿತಾರ್ಥ ಜನವರಿ 1 ರಂದು ನಡೆಯುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin