ನಿಷೇಧದ ತೀರ್ಪು ಕೇಳಿ ಪ್ರಜ್ಞೆ ತಪ್ಪಿ ಬಿದ್ದಿದ್ದ ನರಸಿಂಗ್ ಯಾದವ್

ಈ ಸುದ್ದಿಯನ್ನು ಶೇರ್ ಮಾಡಿ

nARASINGH

ರಿಯೊ ಡಿ ಜನೈರೊ, ಆ.20-ಉದ್ದೀಪನ ಮದ್ದು ಸೇವನೆ ಆರೋಪದ ಸಂಬಂಧ ಕ್ರೀಡಾ ನ್ಯಾಯಾಲಯ(ಸಿಎಎಸ್) ತಮ್ಮ ಮೇಲೆ ನಾಲ್ಕು ವರ್ಷಗಳ ನಿಷೇಧ ವಿಧಿಸಿದ ತೀರ್ಪು ಕೇಳಿ ವಿಚಲಿತರಾದ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಪ್ರಜ್ಞಾಶೂನ್ಯರಾದರು. ತಮ್ಮ ಮೇಲೆ ನಿರ್ಬಂಧ ವಿಧಿಸಿ ಒಲಿಂಪಿಕ್ ಕ್ರೀಡಾ ಗ್ರಾಮದಿಂದ ಹೊರ ಹಾಕುವ ತೀರ್ಪು ಹೊರ ಬೀಳುತ್ತಿದ್ದಂತೆ ಯಾದವ್ ಪ್ರಜ್ಞೆ ತಪ್ಪಿದರು ಎಂದು ಭಾರತ ಕುಸ್ತಿ ಒಕ್ಕೂಟ( ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ಸಿಂಗ್ ಹೇಳಿದ್ದಾರೆ.  ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜತೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನರಸಿಂಗ್ ಪ್ರಜ್ಞಾಶೂನ್ಯರಾದರು. ಇಂದು ಅವರು ಚೇತರಿಸಿಕೊಂಡಿದ್ದಾರೆ. ಇದಕ್ಕಾಗಿ ನಾವು ಯಾರನ್ನೂ ದೂಷಿಸುವುದಿಲ್ಲ. ಸಿಬಿಐ ತನಿಖೆಗೆ ಮಾತ್ರ ನಾವು ಬೇಡಿಕೆ ಸಲ್ಲಿಸುತ್ತೇವೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin