ನಿಷೇಧಿತ ಎನ್‍ಎಸ್‍ಸಿಎನ್(ಐಎಂ) ಸಂಘಟನೆಯ ನಾಲ್ವರು ಕುಖ್ಯಾತ ಉಗ್ರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

4Arrested--Arrested

ಇಂಫಾಲ, ಜ.12-ಕುಖ್ಯಾತ ಭಯೋತ್ಪಾದಕ ಹಾಗೂ ನಿಷೇಧಿತ ಎನ್‍ಎಸ್‍ಸಿಎನ್(ಐಎಂ) ಸಂಘಟನೆಯ ನಾಲ್ವರು ಉಗ್ರಗಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಲವಾರು ಭಯೋತ್ಪಾದಕ ದಾಳಿ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಮಣಿಪುರದ ನಿಷೇಧಿತ ಕಾಂಗ್‍ಲೀಪಾಕ್ ಕಮ್ಯೂನಿಸ್ಟ್ ಪಕ್ಷ (ಕೆಸಿಪಿ) ಮುಖ್ಯಸ್ಥ ಕೊಯಿರಾಂ ರಂಜಿತ್ ಅಲಿಯಾಸ್ ರಾಕಿ ಅಲಿಯಾಸ್ ಗ್ರೇಟ್ ಮಾಚ ಮತ್ತು ಆತನ ಜೊತೆಗಿದ್ದ ಇನುಗ್‍ಬಮ್ ಸನಾತೊಂಬಿ ದೇವಿ ಎಂಬ ಮಹಿಳೆಯನ್ನು ದೆಹಲಿಯ ಮಯೂರ್ ವಿಹಾರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈತ ಮಣಿಪುರದ ವಿವಿಧೆಡೆ ದಾಳಿಗಳನ್ನು ನಡೆಸಿ ಸಾವು-ನೋವುಗಳಿಗೆ ಕಾರಣನಾಗಿದ್ದ. ಈತ ಕೆಲವು ದಿನಗಳಿಂದ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ.

ಇನ್ನೊಂದೆಡೆ ಮಣಿಪುರದ ಥೌಬಾಲ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಮಣಿಪುರ ಪೊಲೀಸ್ ಕಮ್ಯಾಂಡೊಗಳು ಈ ಸಂಘಟನೆ ಮೂವರು ಸದಸ್ಯರು ಮತ್ತು ಉಗ್ರರ ಬಗ್ಗೆ ಅನುಕಂಪ ಹೊಂದಿದ್ದ ಕಾರ್ಯಕರ್ತನನ್ನು ಬಂಧಿಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin