ನಿಷ್ಠೆ, ಪ್ರಾಮಾಣಿಕತೆಯಿಂದ ಯಶಸ್ಸು

ಈ ಸುದ್ದಿಯನ್ನು ಶೇರ್ ಮಾಡಿ

BELGAM3

ಗದಗ,ಆ.27- ಆಡಳಿತದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತಾ ದೊರೆಯುತ್ತದೆ ಎಂದು ಶ್ರೀದುರ್ಗಾದೇವಿ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು. ನಗರದ ಶ್ರೀ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಸೊಸಾಯಿಟಿಯ 12 ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಢಾವೆ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 2015-16ನೇ ಸಾಲಿನಲ್ಲಿ ಸಂಸ್ಥೆಯು 8.41 ಲಕ್ಷ ರೂಗಳ ನಿವ್ಹಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.18 ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸೊಸಾಯಿಟಿ 777 ಸದಸ್ಯರು ಹೊಂದಿದ್ದು, 43.76 ಲಕ್ಷ ರೂಗಳ ಶೇರು ಬಂಡವಾಳ, 1.91 ಕೋಟಿ ಠೇವುಗಳು ಹಾಗೂ 2.56 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದ ಕಳೆದ ಸಾಲಿನಲ್ಲಿ 11.08 ಕೋಟಿ ವ್ಯವಹಾರ ನಡೆಸಿ 8.41 ಲಕ್ಷ ರೂಗಳ ಲಾಭ ಗಳಿಸಿದೆ ಎಂದು ಹೇಳಿದರು.

ಮುಂದಿನ ವರ್ಷದಲ್ಲಿ 75 ಲಕ್ಷ ರೂ ಶೇರು ಸಂಗ್ರಹಿಸುವ ಗುರಿ ಹಾಗೂ ಸದಸ್ಯರ ಮಕ್ಕಳಿಗಾಗಿ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು. ಸೊಸಾಯಿಟಿಯ ನಿರ್ದೇಶಕ ಎಸ್.ಎಸ್. ಗುಡಿಮನಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚು ಸದಸ್ಯರುಗಳಿಂದ ಶೇರುಗಳನ್ನು ಸಂಗ್ರಹಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು. ಇನ್ನೋರ್ವ ನಿರ್ದೇಶಕ ಎಸ್.ಎಸ್. ಗೌಡರ ಮಾತನಾಡಿ, ಸಂಸ್ಥೆಯ ಕೇವಲ ಒಬ್ಬರಿಂದ ಸಾದ್ಯವಿಲ್ಲ ಎಲ್ಲರ ಸಹಕಾರದಿಂದ ಪ್ರಗತಿ ಹೊಂದಲು ಸಾದ್ಯ ಈ ಮಟ್ಟದ ಸಾಧನೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಸದಸ್ಯರ ಪರವಾಗಿ ಎಸ್.ಬಿ. ಕಲ್ಯಾಣಿ ಮಾತನಾಡಿ, ಕಳೆದ 11 ವರ್ಷಗಳ ಹಿಂದೆ ಅವಳಿನಗರದಲ್ಲಿ ಸಹಕಾರ ರಂಗ ಅಷ್ಟು ಭದ್ರವಾಗಿರಲಿಲ್ಲ, ಕೆಸಿಸಿ ಬ್ಯಾಂಕ್ ಅರ್ಹತೆಯನ್ನು ಗಮನಿಸಿದೇ ಎಲ್ಲರಿಗೂ ಸಾಲ ನೀಡಿದ ಪರಿಣಾಮ ಸಾಲಗಾರರು ಸಮಯಕ್ಕೆ ಸರಿಯಾಗಿ ಹಣ ಪಾವತಿಸದೇ ಇದ್ದಾಗ ಕೆಸಿಸಿ ಬ್ಯಾಂಕ್ ಮುಚ್ಚುವ ಹಂತಕ್ಕೆ ತಲುಪಿತು. ಇದರಿಂದ ಅವಲಂಬಿತ ಪ್ರತಿಷ್ಠಿತ ಬ್ಯಾಂಕ್‍ಗಳು ಮುಚ್ಚಿಹೋದಾಗ ಜನರು ಆತಂಕಗೊಂಡು ಸೊಸಾಯಿಟಿಗಳನ್ನು ನಂಬಲಾರದಂತಹ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಸೊಸಾಯಿಟಿಯನ್ನು ಹುಟ್ಟುಹಾಕಿ ಕಳೆದ ಹನ್ನೊಂದು ವರ್ಷದಿಂದ ಉತ್ತಮ ಆಡಳಿತ ನಡೆಸುವ ಮೂಲಕ ಶೇ. 18ರಿಂದ ಶೇ. 20ವರೆಗೆ ಸದಸ್ಯರಿಗೆ ಲಾಭಾಂಶ ನೀಡಿರುವ ಏಕೈಕ ಸಂಸ್ಥೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

 

► Follow us on –  Facebook / Twitter  / Google+

Facebook Comments

Sri Raghav

Admin