ನೀನು ನತದೃಷ್ಟೆ ಎಂದ ಮದುವೆಯಾಗಬೇಕಾದ ಯುವಕ, ಮನನೊಂದ ಯುವತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Women-Suicide--01
ಮಳವಳ್ಳಿ,ಮಾ.2-ನೀನು ನತದೃಷ್ಟೆ ನಿನ್ನೊಂದಿಗಿನ ಮದುವೆ ಬೇಡ ಎಂದ ನಾಲಾಯಕ್ ಯುವಕನ ವರ್ತನೆಯಿಂದ ಬೇಸತ್ತ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಅವಮಾನ ಸಹಿಸಲಾರದೆ ಜೀವ ಕಳೆದುಕೊಂಡಿರುವ ಘಟನೆ ಬೆಂಡರವಾಡಿ ಗ್ರಾಮದಲ್ಲಿ ನಡೆದಿದೆ.ಕಿರುಗಾವಲು ತಾಲೂಕಿನ ಬೆಂಡರವಾಡಿ ನಿವಾಸಿ ತುಳಸಮ್ಮ ಎಂಬುವರ ಪುತ್ರಿ ಪುಟ್ಟಿ (16) ಜೀವ ಕಳೆದುಕೊಂಡ ಹತ್ತನೆ ತರಗತಿ ವಿದ್ಯಾರ್ಥಿನಿ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಪುಟ್ಟಿಯನ್ನು ಅದೇ ಗ್ರಾಮದ ಶಿವಕುಮಾರ್ ಎಂಬಾತ ಪ್ರೀತಿಸುವುದಾಗಿ ನಂಬಿಸಿ ತನ್ನೊಂದಿಗೆ ಕರೆದೊಯ್ದಿದ್ದ. ಎರಡು ಮನೆಯವರು ಯುವ ಜೋಡಿಗಳ ಹುಡುಕಾಟ ನಡೆಸುತ್ತಿದ್ದರು. ಆದರೆ, ಭಾನುವಾರ ಇದ್ದಕ್ಕಿದ್ದಂತೆ ಮನೆಗೆ ಬಂದ ಪುಟ್ಟಿ ಶಿವಕುಮಾರ್ ನನ್ನನ್ನು ಪ್ರೀತಿಸುತ್ತಿದ್ದಾನೆ ಅವನನ್ನೆ ವಿವಾಹವಾಗುತ್ತೇನೆ ಎಂದು ತಿಳಿಸಿದ್ದಳು.

ಆದರೆ, ಪುಟ್ಟಿ ಮನೆಗೆ ಬಂದ ಶಿವಕುಮಾರ್ ಪೋಷಕರಾದ ಪುಟ್ಟಣ್ಣ ಮತ್ತು ಪದ್ಮಮ್ಮ ನನ್ನ ಮಗನ ಮನಸು ಕೇಡಿಸಿ ಕರೆದೊಯ್ದಿದ್ದೇ ನೀನು ಎಂದು ರಂಪ ರಾದ್ದಾಂತ ಮಾಡಿ ತಾಯಿ-ಮಗಳನ್ನು ಹೀನಾಯವಾಗಿ ನಿಂದಿಸಿ ಹೋಗಿದ್ದರು.ಇದರಿಂದ ಮನನೊಂದ ಪುಟ್ಟಿ ಇಂದು ಮುಂಜಾನೆ ಮನೆಯಲ್ಲಿ ತನ್ನ ವೇಲ್ ನಿಂದಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂದ ಬಾಲಕಿ ತಾಯಿ ತುಳಸಮ್ಮ ನೀಡಿದ ದೂರಿನ ಮೇರೆಗೆ ಯುವಕ ಶಿವಕುಮಾರ್ ವಿರುದ್ದ ಪೋಸ್ಕೊ ಹಾಗೂ ಆತನ ತಂದೆ ಪುಟ್ಟಣ್ಣ ತಾಯಿ ಪದ್ಮಮ್ಮ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿರುವ ಕಿರುಗಾವಲು ಠಾಣೆಯ ಸಬ್ ಇನ್ಸ್‍ಪೆಕ್ಟರ್ ನಾಗೇಶ್ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin