ನೀರಾವರಿ ಸಮಸ್ಯೆ ಹೆಚ್ಚಳ ವಿರೋಧಿಸಿ ಬೆಂಗಳೂರಿನಲ್ಲಿ ಸೆ.10ಕ್ಕೆ ರೈತ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

BELAGAM2

ಬೆಳಗಾವಿ,ಆ.31- ಕರ್ನಾಟಕದಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಕಾರಣ ಸರ್ಕಾರಗಳು.ಇದನ್ನು ವಿರೋಧಿಸಿ ಸೆ. 10ರಂದು ಬೆಂಗಳೂರಿನಲ್ಲಿ ರೈತರ ಸಭೆ ನಡೆಸಲಾಗುವುದೆಂದು ರೈತ ಮುಖಂಡಶಾಸಕ ಕೆ.ಎಸ್. ಪುಟ್ಟಣ್ಯ ತಿಳಿಸಿದರು.ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು ಹನ್ನೊಂದುವರೆ ಲಕ್ಷ ಎಕರೆ ಕೃಷಿ ಚಟುವಟಿಕೆ ನಡೆಯುತ್ತಿದೆ. ಈ ಕ್ಷೇತ್ರ ಈಗ ತ್ರಿಶಂಕು ಸ್ಥಿತಿಗೆ ತಲುಪಿದೆ. ದೇಶದಲ್ಲಿ ನೀರಾವರಿ ಮತ್ತು ಬರಗಾಲಕ್ಕೆ ಸೂಕ್ತ ನೀತಿಗಳೆ ಇಲ್ಲವೇ ಇಲ್ಲ ಎಂದು ಆರೋಪಿಸಿದರು.
ದೇಶದಲ್ಲಿ 40ಲಕ್ಷ ಟನ್ ಆಹಾರದ ಕೊರತೆ ಇದೆ ಎನ್ನುವ ಪ್ರಧಾನಿ ಈ ಬಗ್ಗೆ ನೀತಿ ಸ್ಪಷ್ಟಪಡಿಸಿಲ್ಲ. ಮಹದಾಯಿ ಮಧ್ಯಂತರ ತೀರ್ಪು ರಾಜ್ಯಕ್ಕೆ ಹಾನಿಕರವಾಗಿದೆ. ಮಹದಾಯಿ ಕಾವೇರಿ ವಿವಾದವನ್ನು ನ್ಯಾಯಾಲಯದ ಹೊರಗೆ ಪರಸ್ಪರ ಕುಳಿತು ,ಮಾತನಾಡಬೇಕಿದೆ
ಎಂದರು.
ನ್ಯಾಯಾಲಯಗಳು ವಸ್ತು ಸ್ಥಿತಿ ಆದರಿಸಿ ಕಾನೂನಿ ಜತೆಗೆ ಜನಾಂಗೀಯ ಬದುಕಿನ ಅಭ್ಯಾಸ ಮಾಡಬೇಕು ಎಂದು ಅವರು ರಾಜ್ಯದ ಜಲಾಶಯಗಳು ತುಂಬಿಲ್ಲ, ಈ ಸಮಸ್ಯೆ ಪರಿಹಾರಕ್ಕೆ ಈತನಕ ಮೋದಿ, ಸಿದ್ಧರಾಮಯ್ಯ ಮತ್ತು ಈ ಹಿಂದೆ ಮನ್‍ಮೋಹನ್ ಸಿಂಗ್ ಯಾರಿಗೂ ಸಾಧ್ಯವಾಗಿಲ್ಲ. ಕುಡಿಯುವ ನೀರಿನ ಹಂಚಿಕೆ ಮಾಡಲಾಗದ ಆಡಳಿತ ಎಂತದ್ದು ಎಂದು ಅವರು ಕಿಡಿಕಾರಿದರು. ಸಕ್ಕರೆಗೆ ಈಗ ಉತ್ತಮ ಬೆಲೆ ಇದ್ದರೂ ಇನ್ನೂ ಎಫ್‍ಆರ್‍ಸಿ ದರ ಕೊಡಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇನ್ನಿತರೇ ಯೋಜನೆಗಳು ಕೃಷಿ ಕ್ಷೇತ್ರದ ಮೇಲೆ ನಿಂತಿಲ್ಲವೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಯಾಕೆ ಕೃಷಿ ವೇತನ ಆಯೋಗ ರಚಿಸಿಲ್ಲ ಎಂದರು.
ಹೀಗಾಗಲೇ ಅಪಾರ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ನ್ಯಾಯಾ ಸಿಕ್ಕಿಲ್ಲ. ಹಾಗಾಗಿ ರೈತರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೆಂಗಳೂರಲ್ಲಿ ರೈತರ ಸಭೆ ನಡೆಸಲಾಗುವುದೆಂದರು. ಪೊಲೀಸರು, ಸಾರಿಗೆ ಇಲಾಖೆ , ಬ್ಯಾಂಕ್ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಭಟನೆಯಾದರೆ ಮೂರೇ ದಿನಗಳಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸಿ ಪರಿಹಾರ ನೀಡುತ್ತದೆ. ಆದರೆ ರೈತರ ಚಳುವಳಿಗೆ ಬೆಲೆಯೇ ಇಲ್ಲ ಎಂದು ಪುಟ್ಟಣ್ಯ ಆಕ್ರೋಶ ವ್ಯಕ್ತಪಡಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin