ನೀರಿಗಾಗಿ ಬೋರ್‍ವೆಲ್ ಲಾರಿ ತಡೆದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

lorry
ಚಿಕ್ಕಬಳ್ಳಾಪುರ, ಏ.7- ಕುಡಿಯುವ ನೀರಿಗಾಗಿ ಕೊರೆದ ಬೋರ್‍ವೆಲ್‍ನಿಂದ ನೀರು ಸಿಗದ ಕಾರಣ ವಾಪಸ್ಸಾಗುತ್ತಿದ್ದ ಬೋರ್‍ವೆಲ್ ಲಾರಿಯನ್ನು ತಡೆದು ಮತ್ತೊಂದು ಕಡೆ ಕೊರೆದು ನೀರು ಗ್ರಾಮಕ್ಕೆ ಕೊಡಬೇಕೆಂದು ಆಗ್ರಹಿಸಿ ತಾಲ್ಲೂಕಿನ ಆವಲಗುರ್ಕಿ ಗ್ರಾಮಸ್ಥರು ಪಕ್ಷಾತೀತವಾಗಿ ಪ್ರತಿಭಟಿಸಿದರು.
ಜಿಲ್ಲಾಡಳಿತದಿಂದ ಮಂಜೂರಾಗಿದ್ದ ಒಂದು ಕೊಳವೆಬಾವಿ ಕೊರೆಯಿಸಿದರಾದರೂ ಅದರಲ್ಲಿ ನೀರು ಸಿಕ್ಕಿಲ್ಲ ಹಾಗಾಗಿ ವಾಪಸ್ಸು ತೆರಳುತ್ತಿದ್ದ ವಾಹನವನ್ನು ತಡೆದು ಇನ್ನೊಂದು ಕಡೆ ಕೊರೆಸಬೇಕಂದು ಆಗ್ರಹಿಸಿದಾಗ ಅದಕ್ಕೆ ಒಪ್ಪದ ಕಾರಣ ದಿಢೀರ್ ಗಾಡಿ ಮುಂದೆ ನೀರೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ನೀರಿಗೆ ಆಗ್ರಹಿಸಿದರು.

ತಾಲ್ಲೂಕಿನ ಆವಲಗುರ್ಕಿ ಗ್ರಾಮವು ಗ್ರಾ.ಪಂ. ಕೇಂದ್ರಸ್ಥಾನವೂ ಇದಾಗಿದ್ದು ಕುಡಿಯುವ ನೀರಿಗೆ ಒಂದು ಕಿ.ಮೀ.ದೂರಕ್ಕೆ ನಡೆದು ಹೋಗಿ ತರಬೇಕಿದೆ ಇಂಥ ಪರಿಸ್ಥಿತಿಯಲ್ಲಿ ಕೊರೆದ ಕೊಳವೆಬಾವಿಯಲ್ಲೂ ನೀರು ಸಿಕ್ಕಿಲ್ಲವಾದ್ದರಿಂದ ಆವಲಗುರ್ಕಿ ಗ್ರಾಮಕ್ಕೇನಾದರೂ ಮಾಡಿ ಇನ್ನೊಂದು ಕೊಳವೆಬಾವಿ ಕೊರೆದು ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಒತ್ತಾಯಿಸಿದರು. ನಂತರ ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಅವಲತ್ತುಕೊಂಡರು. ಜಿ.ಪಂ.ಸದಸ್ಯ ಕೆ.ಸಿ.ರಾಜಾಕಾಂತ್ ಹಾಗೂ ನೂರಾರು ಗ್ರಾಮಸ್ಥರು ಪ್ರತಿಭಟೆಯಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin