ನೀರಿಟ್ಟು ಪಕ್ಷಿ ಸಂಕುಲ ಉಳಿಸಿ

ಈ ಸುದ್ದಿಯನ್ನು ಶೇರ್ ಮಾಡಿ

bagepalli
ಬಾಗೇಪಲ್ಲಿ, ಮೇ 2- ತಾಲ್ಲೂಕಿನಲ್ಲಿ ಪ್ರತಿದಿನ ಬಿಸಿಲಿನ ತಾಪಮಾನ ತಾರಕ್ಕಕ್ಕೇ ರುತ್ತಿದ್ದು, ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ನೀರಿಲ್ಲದೆ ಬತ್ತಿಹೋಗಿದ್ದು , ಪಕ್ಷಿಗಳು ದಾಹವನ್ನು ನೀಗಿಸಿಕೊಳ್ಳಲು ಪರದಾಡುತ್ತಿವೆ.ಇದರಿಂದ ಎಚ್ಚೆತ್ತಿರುವ ಪುರಸಭೆ ಅಧ್ಯಕ್ಷೆ ಮಮತ ನಾಗರಾಜರೆಡ್ಡಿ ರವರು ಪಕ್ಷಿಗಳ ಸಂಕುಲ ಉಳಿಸಲು ತಮ್ಮ ಮನೆಯ ಮೇಲೆ ನಾಲ್ಕು ಕಡೆಯಲ್ಲಿ ಪ್ಲಾಸ್ಟಿಕ್ ಡಬ್ಬಗಳನ್ನು ಕಟ್ಟಿ ಅದಕ್ಕೆ ನೀರು ಹಾಯಿಸುತ್ತಿದ್ದಾರೆ.ಪ್ರತಿದಿನ ನಾಲ್ಕು ಬಾರಿ ನೀರನ್ನು ಹಾಕಲಾಗುತ್ತಿದ್ದು ಪಟ್ಟಣದ ಹಲವಾರು ಪಕ್ಷಿಗಳು ಇಲ್ಲಿಗೆ ಬಂದು ನೀರನ್ನು ಕುಡಿದುಕೊಂಡು ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತಿವೆ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ.

ನಾವು ಬಳಸುವ ನೀರನ್ನು ಉಳಿಸಿ ಮನೆಗಳ ಮೇಲೆ ಪ್ಲಾಸ್ಟಿಕ್ ಡಬ್ಬಗಳಿಗೆ ನೀರನ್ನು ಹಾಯಿಸಿ ಪಕ್ಷಿಗಳಿಗೆ ನೀರನ್ನು ಒದಗಿಸಬೇಕಿದೆ. ಕೇವಲ ನಾವೊಬ್ಬರೇ ಈ ರೀತಿಯ ಕೆಲಸಗಳನ್ನು ಮಾಡಿದ್ರೆ ಸಾಕಾಗಲ್ಲ , ಎಲ್ಲರೂ ಕೂಡ ತಮ್ಮ ತಮ್ಮ ಮನೆಯ ಮೇಲ್ಛಾವಣಿ ಮೇಲೆ ನೀರನ್ನ ಇಟ್ಟು ಪಕ್ಷಿಗಳನ್ನು ಉಳಿಸಬೇಕೆಂದು ಕರೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin