ನೀರಿನಲ್ಲಿ ಮುಳುಗಿ ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

water
ನೆಲಮಂಗಲ,ಸೆ.14-
ಗಣೇಶ ವಿಸರ್ಜನೆಗೆಂದು ಕೆರೆಗೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾಲೂರು ಗ್ರಾಮದ ನಿವಾಸಿ ಹನುಮಂತರಾಜು(36) ಮೃತ ದುರ್ದೈವಿ.ಗ್ರಾಮದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿತ್ತು. ರಾತ್ರಿ ಮೆರವಣಿಗೆ ನಡೆಸಿ ಗಣೇಶಮೂರ್ತಿಯನ್ನು ಮೂಗನಹಳ್ಳಿ ಕೆರೆಯಲ್ಲಿ ವಿಸರ್ಜಿಸಲು ಹೋಗಲಾಗಿತ್ತು. ಕತ್ತಲಲ್ಲಿ ನೀರಿಗಿಳಿದ ಐದಾರು ಮಂದಿ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಾಪಸ್ ಬರುವಾಗ ಹನುಮಂತ ನಾಪತ್ತೆಯಾಗಿದ್ದ. ತಕ್ಷಣ ಆತ ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಿ ಮೊಬೈಲ್ ಟಾರ್ಚ್ ಆನ್ ಮಾಡಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪುದೂರು ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಶವವನ್ನು ಬೆಳಿಗ್ಗೆ ಮೇಲೆತ್ತಿದ್ದಾರೆ.

 

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin