ನೀರಿನ ಸಮಸ್ಯೆ ಪರಿಹರಿಸಲು ಪ್ರಧಾನಿ ಭೇಟಿಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

7

ಬೈಲಹೊಂಗಲ,ನ.5- ಮಲಪ್ರಭಾ ನದಿಗೆ ಕಳಸಾ ಬಂಡೂರಿ, ಮಹದಾಯಿ ನದಿ ಜೋಡಿಸುವ ಉದ್ದೇಶಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೈೀಟಿ ಆಗಲು ಅವಕಾಶ ನೀಡಬೇಕೆಂದು ಆಗ್ರಹಿಸಿ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ನಿನ್ನೆ ತಹಶೀಲ್ದಾರ ಪ್ರಕಾಶ ಗಾಯಕವಾಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹೋರಾಟ ಸಮಿತಿ ಮುಖಂಡ, ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿ, ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದ ಜನತೆಗೆ ಹಾಗೂ ಕೃಷಿಕರಿಗೆ ಕುಡಿಯುವ ನೀರಿನ ಸಲುವಾಗಿ ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಿಸಲು ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಜನತೆಯ, ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆಮದು ಆರೋಪಿಸಿದರು.

ಮಲಪ್ರಭಾ ನದಿಗೆ ಮಹದಾಯಿ ನದಿಯನ್ನು ಜೋಡಿಸುವಂತೆ ರೈತ ಹಿತರಕ್ಷಣಾ ಸಮಿತಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಹೋರಾಟದ ವೇದಿಕೆಗೆ ಈ ಭಾಗದ ಜನಪ್ರತಿನಿಧಿಗಳು ಆಗಮಿಸಿ ಬೆಂಬಲ ಸೂಚಿಸಿದ್ದರು. ನಗರದ ಕಾಡಾ ಕಚೇರಿಯಲ್ಲಿ ಸಭೈ ನಡೆಸಿ ಈ ಕುರಿತು ಚರ್ಚಿಸಲು, ಗೋವಾ ಹಾಗೂ ದೆಹಲಿಗೆ ತೆರಳಿ ಮಹದಾಯಿ ನದಿ ನೀರಿನ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು ಎಂದರು. ಆದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಪ್ರಧಾನಿಯವರನ್ನು ಭೈೀಟಿ ಮಾಡಿಸಲು ತೊಂದರೆಯಾಗುತ್ತಿದೆ.

ಕೆಎಲ್‍ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನರೇಂದ್ರ ಮೋದಿಯವರು ದಿ. 13 ರಂದು ಬೆಳಗಾವಿಗೆ ಬರುತ್ತಿದ್ದು ಈ ಭಾಗದ ಸಂಸದರು, ಶಾಸಕರು ರೈತ ಹಿತರಕ್ಷಣಾ ಸಮಿತಿಯ ಜೊತಗೆ ಬಂದು ಪ್ರಧಾನ ಮಂತ್ರಿಗಳನ್ನು ಭೈೀಟಿ ಮಾಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹುಂಬಿ, ತಾಪಂ ಸದಸ್ಯ ಸಂಗಯ್ಯ ದಾಭಿಮಠ, ಸುರೇಶ ವಾಲಿ, ಮಂಜುನಾಥ ತೋಟಗಿ, ಸಿದ್ದಲಿಂಗ ಕುಂಬಾರ, ಬಿ.ಪಿ.ಆನಿಕಿವಿ, ಎ.ಎಸ್.ಹುಗ್ಗಿ, ಸಿ.ಎ.ಶಿರೂರ, ಬಿ.ಎಸ್.ಪಟ್ಟಣ, ಐ.ಬಿ.ಕುದ್ದನವರ, ಜಿ.ಎಸ್.ಚರಂತಿಮಠ, ಐ.ಬಿ.ಸಂಬಾಳದ, ಎನ್.ಐ.ಕಿರಕಸಾಲಿ, ಐ.ಎ.ಬಾಗೇವಾಡಿ, ವಿಠ್ಠಲ ಕೋಳಿ, ಯಲ್ಲಪ್ಪ ಮೂಗಬಸವ, ಹಣಮಂತ ಸಾಲಹಳ್ಳಿ ಮುಂತಾದವರು ಇದ್ದರು.

 

 

► Follow us on –  Facebook / Twitter  / Google+

 

 

 

 

 

 

 

Facebook Comments

Sri Raghav

Admin