ನೀರು ಶುದ್ದೀಕರಣ ಯಂತ್ರ ದುರಸ್ತಿಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

water

ಹುಳಿಯಾರು, ಮೇ 1- ಹುಳಿಯಾರಿನ ಸರ್ಕಾರಿ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಬಳಿಯಿರುವ ಸರ್ಕಾರದ ಶುದ್ಧ ನೀರಿನ ಘಟಕದಲ್ಲಿ ಕೆಟ್ಟಿರುವ ಶುದ್ಧೀಕರಣ ಯಂತ್ರವನ್ನು ದುರಸ್ತಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪದವಿ ಕಾಲೇಜಿನ ಬಳಿಯಿರುವ ಈ ಶುದ್ಧ ನೀರಿನ ಘಟಕದಿಂದ ಹುಳಿಯಾರು, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ಸೋಮಜ್ಜನಪಾಳ್ಯ, ಕಾಮಶೆಟ್ಟೆಪಾಳ್ಯ, ಕೆಂಕೆರೆ, ಗೌಡಗೆರೆ, ವೈ.ಎಸ್.ಪಾಳ್ಯ, ಕೋಡಿಪಾಳ್ಯದ ಗ್ರಾಮಸ್ಥರು ಶುದ್ಧ ನೀರನ್ನು ಕೊಂಡುಯ್ಯುತ್ತಿದ್ದಾರೆ.ಹುಳಿಯಾರು, ಕೆಂಕೆರೆ ಗ್ರಾಮಗಳನ್ನು ಬಿಟ್ಟರೆ ಉಳಿದ ಗ್ರಾಮಗಳಲೆಲ್ಲೂ ಶುದ್ಧ ನೀರಿನ ಘಟಕಗಳಿಲ್ಲ. ಹಾಗಾಗಿ ನಿತ್ಯ ಶುದ್ಧ ನೀರು ಕುಡಿಯುತ್ತಿದ್ದವರು ಈಗ ಅಶುದ್ಧ ನೀರು ಕುಡಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ ಶುದ್ಧ ನೀರು ಬೇಕೆನ್ನುವವರು ದುಭಾರಿ ಹಣ ತೆತ್ತು ಖಾಸಗಿಯವರಿಂದ ನೀರು ಖರೀದಿಸಬೇಕಿದೆ.

ಇಲ್ಲಿನ ಘಟಕದಲ್ಲಿ ಪದೇ ಪದೇ ಶುದ್ಧಿಕರಣ ಯಂತ್ರ ಕೆಟ್ಟು ಹೋಗುತ್ತಿದ್ದು ಈಗ ಮೂರ್ನಾಲ್ಕು ದಿನಗಳಿಂದ ಪುನಃ ಕೆಟ್ಟು ಹೋಗಿದೆ. ಹಾಗಾಗಿ ತಕ್ಷಣ ಯಂತ್ರ ದುರಸ್ತಿ ಮಾಡಿಸಿ ಹತ್ತಾರು ಹಳ್ಳಿಗಳ ಶುದ್ಧ ನೀರಿನ ಸಮಸ್ಯೆಗೆ ಮುಕ್ತಿ ಕಾಣಿಸಬೇಕಿದೆ. ಅಲ್ಲದೆ ಪದೇ ಪದೇ ಕೆಟ್ಟು ಹೋಗದಂತೆ ಗುಣಮಟ್ಟದ ಯಂತ್ರಗಳನ್ನು ಅಳವಡಿಸುವಂತೆ ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin