‘ನೀರ್‍ದೋಸೆ’ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

dgsgsfdgಈಗೇ  ಹಲವಾರು ತಿಂಗ ಳಿಂದಲೂ ನೀರ್‍ದೋಸೆ ಎಂಬ ಚಿತ್ರದ ಬಗ್ಗೆ ಹಲವಾರು ಕಾಂಟ್ರಿವರ್ಸಿ ಸುದ್ದಿಗಳನ್ನು ಕೇಳಿ ಕೇಳಿ ಸಾಕಾಗಿದ್ದ ಅಭಿಮಾನಿಗಳಿಗೆ ಅಂತೂ ಇಂತೂ ಚಿತ್ರ ರಿಲೀಸ್ ಆಗುವ ಹಂತಕ್ಕೆ ಬಂದಿರುವುದು ನೆಮ್ಮದಿ ನೀಡಿದೆ. ಈಗಾಗಲೇ ಚಿತ್ರದ ಹಾಟ್ ಹಾಟ್ ಟ್ರೈಲರ್‍ಗಳು ಅಂತರ್ಜಾಲದಲ್ಲಿ   ವೈರಲ್ ಆಗಿ ಹರಿದಾಡುತ್ತಿದೆ. ವಿಜಯಪ್ರಸಾದ್ ಅವರ ನಿರ್ದೇಶನಲ್ಲಿ ಮೂಡಿಬಂದಿರುವ

 

ಹಾಗೂ ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಅಭಿನಯಿಸಿದ ನೀರ್‍ದೋಸೆ ಚಿತ್ರದ ಟ್ರೇಲರ್ ನೋಡಿದ ಸಿನಿಪ್ರಿಯರು ಮೈಚಳಿ ಬಿಟ್ಟು ಅಭಿನಯಿಸಿರುವ ಹರಿಪ್ರಿಯಾರನ್ನು  ಬೆಳ್ಳಿತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

ಅಲ್ಲದೆ ಮೊನ್ನೆತಾನೇ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ನೆರವೇರಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಈ ಚಿತ್ರದ ಹಾಡುಗಳ ಸಿಡಿಗಳನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೆ ನೀನಾಸಂ ಸತೀಶ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ನಾಯಕನಟ ಜಗ್ಗೇಶ್ ತಮ್ಮ ಪತ್ನಿ ಪರಿಮಳಾರೊಂದಿಗೆ ಸಮಾರಂಭಕ್ಕೆ ಆಗಮಿಸಿದ್ದರು. ಅನೂಪ್ ಸಿಳೀನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ನೀರ್‍ದೋಸೆಯ ಹಾಡುಗಳು ತುಂಬಾ ಸೊಗಸಾಗಿ ಮೂಡಿಬಂದಿವೆಯೆಂಬ ಅಭಿಪ್ರಾಯ ಕೇಳಿ ಬಂದಿವೆ.

ನೀರ್‍ದೋಸೆ ಚಿತ್ರತಂಡವನ್ನು  ಸೇರಲು ನಾಯಕಿ ಹರಿಪ್ರಿಯಾಗೆ ಕಾರಣವಾದ ಅಂಶಗಳೇನು, ಆ ಪಾತ್ರಕ್ಕಾಗಿ ಹರಿಪ್ರಿಯಾ ಏನೆಲ್ಲ ಸರ್ಕಸ್ ಮಾಡಿದರು ಅನ್ನೋದನ್ನು  ಮುಂದೆ ಓದಿ. ಈ  ನೀರ್‍ದೋಸೆ ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಕುಮುದಾ ಎಂಬ ಒಬ್ಬ  ವೇಶ್ಯೆಯ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಈ ಪಾತ್ರವನ್ನ ಒಪ್ಪಿಕೊಳ್ಳಲು ತುಂಬಾ  ಹಿಂದೇಟು ಹಾಕಿದ ಹರಿಪ್ರಿಯಾ, ಈ ಬಗ್ಗೆ ತಮ್ಮ ಮನೆಯಲ್ಲಿ ಹಾಗೂ ಆಪ್ತರೊಡನೆ ತುಂಬಾ ಚರ್ಚಿಸಿದರಂತೆ, ಎಷ್ಟೋ ಬಾರಿ ಆಗಲ್ಲ ಎಂದು ಹೇಳಲು ಪ್ರಯತ್ನಿಸಿದ್ದೂ ಉಂಟಂತೆ. ಆದರೆ ಚಿತ್ರದಲ್ಲಿರುವ ಉತ್ತಮವಾದ ಕಥೆ ಅವರನ್ನು ಈ ಪಾತ್ರದಲ್ಲಿ  ಅಭಿನಯಿಸುವಂತೆ ಪ್ರೇರೇಪಿಸಿದೆ.

ಆರಂಭದ ದಿನಗಳಲ್ಲಿ  ಈ ಚಿತ್ರದಲ್ಲಿ ನಟಿ ರಮ್ಯಾ ಅವರು ವೇಶ್ಯೆ ಕುಮುದಾಳ ಪಾತ್ರದಲ್ಲಿ  ಕಾಣಿಸಿಕೊಂಡಿದ್ದರು, ಶೂಟಿಂಗ್ ಸಮಯದಲ್ಲಿ ಫೋಟೋ ತೆಗೆದ ಛಾಯಾಗ್ರಾಹಕರ ಮೇಲೆ ಹರಿಹಾಯ್ದಿದ್ದ  ರಮ್ಯಾ ನಂತರ ರಾಜಕೀಯ ಸೇರಿ ಬ್ಯೂಸಿಯಾದರು. ಆ ಪಾತ್ರವನ್ನು ಮುಂದುವರೆಸಿದರೆ ತನ್ನ ರಾಜಕೀಯ ಜೀವನಕ್ಕೆ ಎಲ್ಲಿ ಕಪ್ಪುಮಸಿ ಬಳಿದಂತಾಗುತ್ತದೋ ಎಂದು ಹೆದರಿದ ಅವರು  ಚಿತ್ರತಂಡದಿಂದ ಹೊರಬಂದಿದ್ದು ನಿಮಗೆಲ್ಲಾ  ಗೊತ್ತಿರುವ  ವಿಷಯ. ನಂತರ ರಮ್ಯಾ ಅವರ ಜಾಗವನ್ನು ಈ  ಹರಿಪ್ರಿಯಾ ತುಂಬಿದರು. ಚಿತ್ರದಲ್ಲಿ ಸಖತ್ ಹಾಟಾಗಿ  ಕಾಣಿಸಿಕೊಂಡಿರುವ  ಅವರು ಈಗ ನೀರ್‍ದೋಸೆಯನ್ನ ತಮ್ಮ ಅಭಿಮಾನಿಗಳಿಗೆ ಸರ್ವ್ ಮಾಡಲು ಕಾಯುತ್ತಿದ್ದಾರೆ. ಸ್ಕಂತ ಎಂಟರ್‍ಪ್ರೈಸಸ್ ಅಡಿಯಲ್ಲಿ ಶಶಿಕಲಾ ಬಾಲಾಜಿ ಹಾಗೂ ಪ್ರಸನ್ನ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಿರಿಯನಟಿ ಸುಮನ್ ರಂಗನಾಥ್, ದತ್ತಣ್ಣ ಕೂಡ ಈ ಚಿತ್ರದಲ್ಲಿ  ನಟಿಸಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin