ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

13

ಬೆಟಗೇರಿ,ಫೆ.10- ಶ್ರೀಶೈಲ ಮೂಲಪೀಠ ಸೂರ್ಯಸಿಂಹಾಸನ ಆಧಿಭಿಕ್ಷಾವತಿ ಶ್ರೀ ಮಜ್ಜಗದ್ಗುರು 1008 ಶ್ರೀ ನೀಲಕಂಠ ಪಟ್ಟದ ಅರ್ಯ ಮಹಾಸ್ವಾಮಿಗಳವರ ಪಟ್ಟಾಭಿಷೇಕದ 19ನೇ ವರ್ಧಂತಿ ಮಹೋತ್ಸವವನ್ನು ರಾಘವೇಂದ್ರ ಶ್ಯಾಮಣ್ಣ ಚೇಗೂರು ಗಂಗಾವತಿ ಉದ್ಘಾಟಿಸಿದರು. ಕುರುಹಿನಶೆಟ್ಟಿ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದ ಮಾಂಗಲ್ಯಧಾರಣ, ಆಕ್ಷತಾರೋಪಣ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಮದ್ ಜಗದ್ಗರು ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಮಂಗಲಾಶೀರ್ವಾದ ನೀಡಿದರು. ಮುಖ್ಯ ಅತಿಥಿಗಳಾಗಿ ನಿಡಗುಂದಿ ಆಯುರ್ವೇದ ಮೆಡಿಕಲ್ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ. ಸುವರ್ಣಾ ಪರಪ್ಪ, ಇವರು ಆಗಮಿಸಿದ್ದರು.ಮುಖ್ಯ ಅತಿಥಿಗಳಾಗಿ ಕೆವಿಜಿ ಬ್ಯಾಂಕ್ ಬೆಟಗೇರಿ ವಿಭಾಗ ಹಿರಿಯ ಅಧಿಕಾರಿ ಸಂಗಪ್ಪ ಫಕ್ಕೀರಪ್ಪ ಹಳ್ಳಿಕೇರಿ, ಬೆಟಗೇರಿಯ ಶ್ರೀ ನೀಲಕಂಠೇಶ್ವರ ಪತ್ತಿನ ಸೌಹಾರ್ಧ ಸಹಕಾರಿದ ಅಧ್ಯ್ಕಕ್ಷ ರಘುನಾಥ ಎನ್. ತುಕ್ಕಾ ಮತ್ತು ಗಣ್ಯ ಜವಳಿ ವ್ಯಾಪಾರಸ್ಥ ಮೈಲಾರಪ್ಪ ಚಿಕ್ಕಪ್ಪ ಅರಣಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವರ್ಧಂತಿ ಮಹೋತ್ಸವದ ಉತ್ಸವ ಕಮಿಟಿ ಪದಾಧಿಕಾರಿ ಅಧ್ಯಕ್ಷ ಶ್ರೀನಿವಾಸ ಸಾಂಭಶಿವ ತಟ್ಟಿ, ಉಪಾಧ್ಯಕ್ಷ ಪ್ರಕಾಶ ನಿಂಗಪ್ಪ ಡಾಣಿ, ಗವಿಸಿದ್ದಪ್ಪ ಮೈಲಾರಪ್ಪ ಅರಣಿ, ಕಾರ್ಯದರ್ಶಿ ರಾಘವೇಂದ್ರ ಮೈಲಾರಪ್ಪ ಅರಣಿ, ಸಹ ಕಾರ್ಯದರ್ಶಿ ಮಂಜುನಾಥ ದೊಡ್ಡಬಸಪ್ಪ ಮಾದಗುಂಡಿ, ಕೋಶಾಧ್ಯಕ್ಷರಾದ ಸದಾನಂದ ಮಲ್ಲಪ್ಪ ಮಾಂತಗೊಂಡ, ಸಹ ಕೋಶಾಧ್ಯಕ್ಷ ರಾಮಚಂದ್ರಪ್ಪ ಬಸಪ್ಪ ಸರಲಾ, ಸಂಘಟನಾ ಕಾರ್ಯದರ್ಶಿ ಚಿದಾನಂದ ಈರಣ್ಣ ಉಪ್ಪಳದ ಸೇರಿದಂತೆ ಸಲಹಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin