‘ನೀವು ಮಂಗಳ ಗ್ರಹದಲ್ಲಿ ಸಿಲುಕಿದ್ದರೂ ನಾನು ಸಹಾಯ ಮಾಡುತ್ತೇವೆ’ : ಸುಷ್ಮಾ ಸ್ವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--000

ನವದೆಹಲಿ, ಜೂ.8- ನೀವು ಮಂಗಳಗ್ರಹದಲ್ಲಿ ಸಿಲುಕಿದ್ದರೂ ನಾವು ನಿಮಗೆ ಸಹಾಯ ಮಾಡುತ್ತೇವೆ-ಇದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಅಭಿಮಾನಿಯೊಬ್ಬರಿಗೆ ನೀಡಿರುವ ಹಾಸ್ಯಲೇಪಿತ ಪ್ರತಿಕ್ರಿಯೆ.   ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿರುವ ಸಚಿವರಲ್ಲೇ ಸುಷ್ಮಾ ಸ್ವರಾಜ್ ಅತ್ಯಂತ ಜನಪ್ರಿಯ ಮಂತ್ರಿಯಾಗಿದ್ದಾರೆ. ಇದಕ್ಕೆ ಟ್ವೀಟರ್‍ನಲ್ಲಿರುವ 80 ಲಕ್ಷ ಅನುಯಾಯಿಗಳೇ ಇದಕ್ಕೆ ಸಾಕ್ಷಿ. ವಿದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಕ್ಷಿಪ್ರ ಕ್ರಮಗಳನ್ನು ಕೈಗೊಂಡು ಸಹಾಯಹಸ್ತ ಚಾಚುತ್ತಿರುವ ಸುಷ್ಮಾ ಅವರ ಕಾರ್ಯವೈಖರಿಗೆ ಅಪಾರ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.ಎಡಬಿಡದ ಕರ್ತವ್ಯದ ಒತ್ತಡಗಳ ನಡುವೆಯೂ ಟ್ವೀಟರ್‍ನಲ್ಲಿ ಸಕ್ರಿಯವಾಗಿರುವ ಅವರು ನೆರವು ಕೋರಿದವರಿಗೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ನೀವು ವಿದೇಶದಲ್ಲಿದ್ದರೆ ಭಾರತೀಯ ರಾಯಭಾರಿ ಕಚೇರಿ ನಿಮ್ಮ ಆಪ್ತಮಿತ್ರ ಎಂದು ಮೊನ್ನೆ ತಾನೆ ಅವರು ಅಭಯ ನೀಡಿದ್ದರು.   ನೀವು ಮಂಗಳಗ್ರಹದಲ್ಲಿ ಸಿಲುಕಿದ್ದರೂ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಸುಷ್ಮಾ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಅನುಯಾಯಿಯೊಬ್ಬರಿಗೆ ಹಾಸ್ಯಮಿಶ್ರಿತವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ವಿದೇಶದಲ್ಲಿರುವ ಭಾರತೀಯರಷ್ಟೇ ಅಲ್ಲ ಭಾರತದಲ್ಲಿ ಸಂಕಷ್ಟಕ್ಕೆ ಒಳಗಾದ ವಿದೇಶಿಯರಿಗೂ ಮನಮಿಡಿಯುವ ಉದಾತ್ತ ಗುಣ ಇವರದು. ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಚಿಕಿತ್ಸೆಗಾಗಿ ಬರುವ ಮಕ್ಕಳ ಯೋಗಕ್ಷೇಮಕ್ಕೆ ಪ್ರಥಮ ಆದ್ಯತೆ ನೀಡುವ ಇವರು ವಿದೇಶಗಳ ಮುಖಂಡರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin