ಅನುಮತಿ ಇಲ್ಲದೇ ವಿವಾಹವಾಗಿದ್ದಕ್ಕೆ ಮಗಳನ್ನೇ ಸುಟ್ಟು ಕೊಂದ ತಾಯಿಗೆ ಮರಣದಂಡನೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Mother

ಲಾಹೋರ್, ಜ.18- ಕುಟುಂಬದ ಅನುಮತಿ ಇಲ್ಲದೇ ವಿವಾಹವಾದ ತಪ್ಪಿಗೆ ಶಿಕ್ಷೆ ರೂಪದಲ್ಲಿ ಹೆತ್ತ ಮಗಳನ್ನೇ ಜೀವಂತ ಸುಟ್ಟು ಕೊಂದು ಹಾಕಿದ ಮಹಾತಾಯಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಕಳೆದ ಜೂನ್‍ನಲ್ಲಿ ತಾನು ಮಗಳನ್ನು ಸುಟ್ಟು ಕೊಂದಿರುವುದಾಗಿ ಪರ್ವಿನ್ ಬೀಬಿ ಎಂಬ ಮಹಿಳೆ ಲಾಹೋರ್ ವಿಶೇಷ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಳು.. ತನ್ನ ಕುಟುಂಬಕ್ಕೆ ಅಪಮಾನ ಮಾಡಿದ್ದಕ್ಕಾಗಿ ಈ ಕ್ರೂರ ಕೃತ್ಯ ಎಸಗಿದ್ದಾಗಿ ಆಕೆ ಕಾರಣ ನೀಡಿದ್ದಳು.  ತನ್ನ ಮಗಳು 18 ವರ್ಷದ ಜೀನತ್ ರಫೀಕ್, ಹಸನ್ ಖಾನ್ ಎಂಬಾತನನ್ನು ಕುಟುಂಬದ ತೀವ್ರ ವಿರೋಧದ ನಡುವೆಯೂ ವಿವಾಹವಾಗಿದ್ದಳು, ನಿಖಾ ಆದ ಒಂದು ವಾರದ ನಂತರ ಮದುಮಗಳಿಗೆ ಸಹೋದರ ಅನೀಸ್ ಮತ್ತು ತಾಯಿ ಪರ್ವಿನ್ ತೀವ್ರ ಹಲ್ಲೆ ನಡೆಸಿದ್ದರು. ನಂತರ ಹೆತ್ತ ಮಾತೆಯೇ ಮಗಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು.

ಈ ಪ್ರಕರಣದಲ್ಲಿ ಸಹೋದರ ಅನೀಸ್‍ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ತಾಯಿಯ ಬರ್ಬರ ಕೃತ್ಯಕ್ಕಾಗಿ ಮರಣದಂಡನೆ ವಿಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin