ನೂತನ ದಾಂಪತ್ಯಕ್ಕೆ ಕಾಲಿಟ್ಟ 35 ಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

BELAGAM3

ಇಳಕಲ್,ಆ.31- ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರದಂದು ನಗರದ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ     ಮಹೋತ್ಸವದ ಅಂಗವಾಗಿ ನಗರದ ಅಡತ್ ಮರ್ಚಂಟ್ಸ್ ಅಸೋಸಿಯೇಶನ್ ಹಾಗೂ ಶ್ರೀ ವಿಜಯ ಮಹಾಂತೇಶ ಮಾರ್ಕೆಟ್ ಯಾರ್ಡ್ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 35 ಜೋಡಿ ನೂತನ ದಾಂಪತ್ಯ ಜೀವನಕ್ಕೆ ಹರಗುರು-ಚರಮೂರ್ತಿಗಳ ಸಮ್ಮುಖದಲ್ಲಿ ಪಾದಾರ್ಪಣೆ ಮಾಡಿದರು. ಈ ಸಾಮೂಹಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ, ಈ ಕಲ್ಯಾಣ ಮಹೋತ್ಸವದಲ್ಲಿ ಮದುವೆಯಾದ ಜೋಡಿಗಳು ಶರಣರ ಹಾದಿಯಲ್ಲಿ ತಮ್ಮ ಸುಂದರ ಬದುಕನ್ನು ಕಟ್ಟಿಕೊಂಡು ಉತ್ತಮ ಜೀವನ ನಡೆಸುವ ಜೊತೆ ಹುಟ್ಟುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು.

ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವ ಮೂಲಕ ಆರ್ಥಿಕ ಉಳಿತಾಯ ಆಗುತ್ತದೆ ಎಂದರು. ಬಸವ ಬೆಳವಿಯ ಚರಂತೇಶ್ವರ ಮಠದ ಶರಣ ಬಸವ ದೇವರು ಮಾತನಾಡಿ, ಪೂಜ್ಯ ಶ್ರೀಗಳ ಸಮ್ಮುಖದಲ್ಲಿ ಸತಿಪತಿಗಳಾದವರು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಬೇಕು. ಶರಣ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರಲ್ಲದೇ ಕಳೆದ 32 ವರ್ಷಗಳಿಂದ ಸತತವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವುದು ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಗುರುಮಹಾಂತ ಶ್ರೀಗಳು ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ, ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳ ಮೇಲೆ ಬಸವಾದಿ ಶರಣರ ಮತ್ತು ಶ್ರೀ ವಿಜಯ ಮಹಾಂತ

ಶಿವಯೋಗಿಗಳ ಆರ್ಶೀವಾದ ಮತ್ತು ಅಂತಃಕರಣ ಇರಲೆಂದು ಹಾರೈಸಿದರು. ಡಾ. ಮಹಾಂತ ಮಹಾಸ್ವಾಮಿಗಳು, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು, ಲಿಂಗಸಗೂರಿನ ಸಿದ್ಧಲಿಂಗ ಮಹಾಸ್ವಾಮಿಗಳು, ಶಿರೂರಿನ ಡಾ. ಬಸವಲಿಂಗ ಮಹಾಸ್ವಾಮಿಗಳು, ಸಿದ್ದಯ್ಯನಕೋಟೆಯ ಬಸವಲಿಂಗ ಶ್ರೀಗಳು ಹಾಗೂ ಹರಗುರು-ಚರಮೂರ್ತಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ನಗರಸಭೈ ಅಧ್ಯಕ್ಷೆ ತೇಜಮ್ಮ ವದ್ದಿ, ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಂತಗೌಡ ಪಾಟೀಲ, ಸಂಗಣ್ಣ ಕಂಪ್ಲಿ, ಅಡತ್ ಮರ್ಚಂಟ್ಸ್ ಅಸೋಸಿಯೇಶನ್ ಹಾಗೂ ಶ್ರೀ ವಿಜಯ ಮಹಾಂತೇಶ ಮಾರ್ಕೆಟ್ ಯಾಡ್ ಪದಾಧಿಕಾರಿಗಳು, ಸದಸ್ಯರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin