ನೂತನ ಮುಖ್ಯ ಕಾರ್ಯದರ್ಶಿ ಕುಂಟಿಯಾ ಬಗ್ಗೆ ವೆಬ್‍ಸೈಟ್‍ನಲ್ಲಿಲ್ಲ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

Govt

ಬೆಂಗಳೂರು,ಅ.6-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸುಭಾಷ್ ಚಂದ್ರ ಕುಂಟಿಯಾ ಅಧಿಕಾರ ಸ್ವೀಕರಿಸಿ ಒಂದು ವಾರ ಕಳೆದರೂ, ಸರ್ಕಾರದ ಅಧಿಕೃತ ವೆಬ್‍ಸೈಟ್‍ನಲ್ಲಿ ಈಗಲೂ ನಿವೃತ್ತಿಯಾಗಿರುವ ಅರವಿಂದ ಜಾದವ್ ಸೇವೆಯಲ್ಲಿದ್ದಾರೆಂದೆ ತೋರಿಸುತ್ತಿದೆ .ಕಳೆದ ಅಕ್ಟೋಬರ್ 1 ರಂದು ಅರವಿಂದ್ ಜಾದವ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿ ಪಡೆದಿದ್ದರು.ಅವರಿಂದ ತೆರವಾಗಿದ್ದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಸುಭಾಷ್ ಚಂದ್ರ ಕುಂಟಿಯಾರನ್ನು ನೇಮಿಸಿ ಅಧಿಕೃತವಾಗಿ ಘೋಷಿಸಲಾಗಿತ್ತು .

ಆದರೆ ಸುಭಾಷ್ ಚಂದ್ರ ಕುಂಟಿಯಾ ಅಧಿಕಾರ ಸ್ವೀಕರಿಸಿ ಒಂದು ವಾರ ಕಳೆದರೂ ಕೂಡ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ವೆಬ್ ಸೈಟ್‍ನಲ್ಲಿ ಇನ್ನೂ ಹೆಸರುಗಳನ್ನು ಬದಲಾವಣೆ ಮಾಡಿಲ್ಲ . ಈಗಲೂ ನಿವೃತ್ತಿಯಾಗಿರುವ ಅರವಿಂದ್ ಜಾದವ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ,ಹಾಲಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಇನ್ನೂ ಕೇಂದ್ರ ಸರ್ಕಾರದ ಸೇವೆಯಲ್ಲಿದಾರೆಂದು ವೆಬ್‍ಸೈಟ್ ತೋರಿಸುತ್ತಿದೆ.ಇದರಿಂದ ಸರ್ಕಾರದ ಆಡಳಿತ ಮಂಡಳಿಯ ನಿರ್ಲಕ್ಷೆ ಮತ್ತು ಮಂದಗತಿಯ ಆಡಳಿತಕ್ಕೆ ಹಿಡಿದ ಕನ್ನಡಿಯಂತಾಗಿದೆ .

 

► Follow us on –  Facebook / Twitter  / Google+

Facebook Comments

Sri Raghav

Admin