ನೂತನ ಸಬ್ ಇನ್ಸ್‍ಪೆಕ್ಟರ್ ನರೇಶ್ ನಾಯಕ್  ರೌಡಿಗಳಿಗೆ ಖಡಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

bagepalli

ಬಾಗೇಪಲ್ಲಿ, ಏ.22- ಬಾಗೇಪಲ್ಲಿ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್‍ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿರುವ ನರೇಶ್ ನಾಯಕ್ ಇಲ್ಲಿನ ರೌಡಿ ಶೀಟರುಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಬಾಗೇಪಲ್ಲಿ ಠಾಣೆಯಲ್ಲಿ ಸುಮಾರು 28 ರೌಡಿ ಶೀಟರುಗಳ ಪರೇಡ್ ನಡೆಸಿದ ಸಬ್ ಇನ್ಸ್‍ಪೆಕ್ಟರ್ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ವಿಚಾರಿಸಿ ಅವರು ಮಾಡಿರುವ ಕ್ರಿಮಿನಲ್ ಪ್ರಕರಣಗಳನ್ನು ನೆನಪಿಸಿದರು. ಸರ್ಕಾರಿ ಕಚೇರಿಗಳಲ್ಲಾಗಲಿ, ಸಾರ್ವಜನಿಕರಿಂದಾಗಲಿ ಬೆದರಿಸಿ ಹಣ ವಸೂಲಿ ಮಾಡುವುದು, ಮತ್ತಿತರ ಸಮಾಜ ದ್ರೋಹಿ ಕೆಲಸಗಳಲ್ಲಿ ಭಾಗವಹಿಸಿದರೆ ಗೂಂಡಾ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಯಾವುದೇ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪರ ಗುತುತಿಸಿಕೊಂಡು ಉದ್ದೇಶಪೂರ್ವಕವಾಗಿ ಗಲಾಟೆಗಳನ್ನು ನಡೆಸುವಂತಹ ನಿಮ್ಮ ಹಳೇ ಚಾಳಿಯನ್ನು ಬದಲಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin