ನೆಲಮಂಗಲದ ಬಳಿ ಯುವತಿಯ ರೇಪ್ ಅಂಡ್ ಮರ್ಡರ್

ಈ ಸುದ್ದಿಯನ್ನು ಶೇರ್ ಮಾಡಿ

Rape-and-Murder

ನೆಲಮಂಗಲ, ಡಿ.30– ವಿವಾಹಿತ ಯುವತಿಯನ್ನು ಕರೆತಂದ ಪರಿಚಿತರೆ ಆಕೆ ಮೇಲೆ ಅತ್ಯಾಚಾರವೆಸಗಿ ಧರಿಸಿದ್ದ ವೇಲ್‍ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿ ರಸ್ತೆ ಬದಿ ಬಿಸಾಡಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಸುಮಾರು 25 ವರ್ಷದವರಂತೆ ಕಾಣುವ ಈಕೆ ಕಾಲುಂಗುರ ಧರಿಸಿದ್ದಾಳೆ.   ನಿನ್ನೆ ರಾತ್ರಿ ಪರಿಚಿತರೇ ಈಕೆಯನ್ನು ಕಾರಿನಲ್ಲಿ ಕರೆತಂದು ನೆಲಮಂಗಲದಿಂದ ತೊಂಡೆಕೊಪ್ಪ ರಸ್ತೆ ಕಡೆಗೆ ಹೋಗುವ ಮಾರ್ಗ ಮಧ್ಯೆ ವೆಂಕಟಾಪುರ ಸಮೀಪದ 100ಮೀಟರ್ ದೂರದಲ್ಲಿ ಈಕೆ ಮೇಲೆ ಅತ್ಯಾಚರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿದ್ದು, ಅರೆನಗ್ನ ಸ್ಥಿತಿಯಲ್ಲಿ ಯುವತಿ ಶವ ಕಂಡು ಪೊಲೀಸರಿಗೆ ತಿಳಿಸಿದ್ದಾರೆ.

ಮಾದನಾಕನಹಳ್ಳಿ ಸಿಪಿಐ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ. ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin