ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Couple-Suicide

ಕೆ.ಆರ್.ಪೇಟೆ, ಮೇ 10-ವಿವಾಹಿತ ಪ್ರೇಮಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ಮಲ್ಲೇನಹಳ್ಳಿ ಗ್ರಾಮದ ಶೇಖರ್(38) ಮತ್ತು ಸೌಮ್ಯ(30) ಆತ್ಮಹತ್ಯೆ ಮಾಡಿಕೊಂಡವರು.ಘಟನೆಯ ವಿವರ:  

ಮಲ್ಲೇನಹಳ್ಳಿ ಗ್ರಾಮದ ಸಿದ್ದೇಗೌಡ ಎನ್ನುವವರ ಮಗ ಶೇಖರನಿಗೆ ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದು ಈತನಿಗೆ 1ಹೆಣ್ಣು ಮತ್ತು 1 ಗಂಡು ಇಬ್ಬರು ಮಕ್ಕಳಿದ್ದಾರೆ. ಇದೇ ಗ್ರಾಮದ ಸಣ್ಣಕರೀಗೌಡರ ಮಗ ಶಂಕರೇಗೌಡ ಎನ್ನುವವರು ಸೌಮ್ಯಳನ್ನು ಕಳೆದ 10 ವರ್ಷಗಳ ಹಿಂದೆ ವಿವಾಹ ಮಾಡಿಕೊಂಡಿದ್ದು ಸೌಮ್ಯಳಿಗೆ ಸುಮಾರು 9 ವರ್ಷದ ಗಂಡು ಮಗನಿದ್ದಾನೆ.
ಎರಡು ಕುಟುಂಬದ ಈ ಇಬ್ಬರು ವಿವಾಹಿತರು ಪರಸ್ಪರ ಆಕರ್ಷಣೆಗೊಳಗಾಗಿದ್ದು ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.

ಈ ನಡುವೆ ಕಳೆದ 10 ದಿನಗಳ ಹಿಂದೆ ಈ ಇಬ್ಬರು ತಮ್ಮ ತಮ್ಮ ಕುಟುಂಬವನ್ನು ತೊರೆದು ಗ್ರಾಮದಿಂದ ನಾಪತ್ತೆಯಾಗಿದ್ದರು. ಆದರೆ ಇಂದು ಗ್ರಾಮಕ್ಕೆ ವಾಪಸ್ ಬಂದು ಸಾಮಾಜಿಕ ನಿಂಧನೆಗೆ ಹೆದರಿ ಮಲ್ಲೇನಹಳ್ಳಿ ಬಳಿಯ ಇರುವ ಹೇಮಾವತಿ ಕಾಲುವೆಯ ಮೇಲಿನ ಹೊಂಗೆ ಮರದಲ್ಲಿ ನೇಣು ಬಿಗಿದುಕೊಂಡು ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಕುರಿತು ಎರಡೂ ಕುಟುಂಬದವರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.   ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ವೈಧ್ಯಕೀಯ ಪರೀಕ್ಷೆಗಾಗಿ ಇಡಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿರುವ ಪಟ್ಟಣ ಪೊಲೀಸರು ಆತ್ಮಹತ್ಯೆಯೋ ಅಥವಾ ಯಾರೋ ಕೊಲೆ ಮಾಡಿ ನೇತಾಕಿರಬಹುದೋ ಎನ್ನುವುದರ ಬಗ್ಗೆ ನಿಖರ ಮಾಹಿತಿ ತಿಳಿಯಲು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin