ನೇತಾಜಿ ಧೈರ್ಯ ಮತ್ತು ಸಾಹಸದ ಗುಣಗಾನ ಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Netaji

ನವದೆಹಲಿ,ಜ.23- ದೇಶ ಗೌರವ ಸುಭಾಷ್‍ಚಂದ್ರ ಬೋಸ್ ಅವರ ಜನ್ಮ ದಿನೋತ್ಸವದ ಅಂಗವಾಗಿ ನೇತಾಜಿ ಅವರ ಧೈರ್ಯ ಮತ್ತು ಸಾಹಸವನ್ನು ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅವರು ವಹಿಸಿದ ಪಾತ್ರ ದೊಡ್ಡದು ಎಂದು ಬಣ್ಣಿಸಿದ್ದಾರೆ.  ಇದೇ ಸಂದರ್ಭದಲ್ಲಿ ನೇತಾಜಿಯವರ ಕುರಿತ ಕಡತಗಳನ್ನು ಬಹಿರಂಗಗೊಳಿಸುವುದಾಗಿ ಅವರು ಪುನರುಚ್ಚರಿಸಿದ್ದಾರೆ.  ನಾನು ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಧೈರ್ಯ, ಶೌರ್ಯ ಮತ್ತು ಸಾಹಸಕ್ಕೆ ವಂದಿಸುತ್ತೇನೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ವಹಿಸಿದ ಪಾತ್ರ ತುಂಬ ಹಿರಿದು ಎಂದು ಟ್ವಿಟ್‍ನಲ್ಲಿ ಮೋದಿ ಕೊಂಡಿದ್ದಾರೆ. ನೇತಾಜಿಯವರು ವೀರ ಸೇನಾನಿ ಮಾತ್ರವಾಗಿರಲಿಲ್ಲ. ದೇಶದ ದುರ್ಬಲ ವರ್ಗಗಳ ಹಿತಾಸಕ್ತಿಗಳು ಮತ್ತು ಸೌಖ್ಯಕ್ಕಾಗಿ ಸದಾ ಚಿಂತನಾಶೀಲರಾಗಿದ್ದರು ಎಂದು ಮೋದಿ ಸ್ಮರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin