ನೇತ್ರದಾನಕ್ಕೆ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

tumakuru

ತುಮಕೂರು, ಆ.30- ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ತಮ್ಮ ಕಣ್ಣುಗಳನ್ನು ಮರಣಾ ನಂತರ ದಾನ ಮಾಡಲು ಒಪ್ಪಿಗೆ ಪತ್ರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ನಗರದ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 5ನೇ ಮೆಡಾನ್ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮರಣೋತ್ತರ ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದರು. ಬಳಿಕ ಮಾತನಾಡಿದ ಅವರು ವ್ಯಕ್ತಿಯ ಕಣ್ಣುಗಳನ್ನು ಆತ ಮರಣ ಹೊಂದಿದ 6 ಗಂಟೆ ಅವಧಿಯೊಳಗೆ ದಾನ ಮಾಡಬಹುದಾಗಿದೆ.

ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಬಗ್ಗೆ ವ್ಯಕ್ತಿಯು ನೇತ್ರ ಭಂಡಾರಗಳಿಗೆ(ಐ ಬ್ಯಾಂಕ್) ಒಪ್ಪಿಗೆ ಪತ್ರ ಬರೆದುಕೊಡುವುದಲ್ಲದೆ ಈ ವಿಷಯದ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿರಬೇಕು. ಇದರಿಂದ ವ್ಯಕ್ತಿಯು ಸತ್ತ ನಂತರ ಕುಂಟುಂಬ ಸದಸ್ಯರು ಸಮೀಪದ ಐ ಬ್ಯಾಂಕ್ ಅನ್ನು ಸಂಪರ್ಕಿಸಿ ಕಣ್ಣುಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಸಿದ್ದಾರ್ಥ ಮೆಡಿಕಲ್ ಕಾಲೇಜಿನ ನೇತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ|| ಸಂಧ್ಯಾ. ಆರ್. ಮಾತನಾಡಿ ಈ ವೈದ್ಯಕೀಯ ಕಾಲೇಜಿನ 22 ವಿವಿಧ ವಿಭಾಗಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸಲಿವೆ.

 

ನೇತ್ರ ಚಿಕಿತ್ಸಾ ವಿಭಾಗವು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದು, ಮರಣೋತ್ತರ ದಾನಿಗಳಿಂದ ಕಣ್ಣುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಜಂಟಿ ಕಾರ್ಯದರ್ಶಿ ಡಾ.ಜಿ.ಶಿವಪ್ರಸಾದ್, ಕಾರ್ಯಕ್ರಮದ ಆಯೋಜನಾ ಕಾರ್ಯದರ್ಶಿ ಡಾ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin