ನೇತ್ರದಾನ ಮಾಡಿ ಜನ್ಮದಿನ ಸಾರ್ಥಕ ಮಾಡಿಕೊಳ್ಳಲು ಮುಂದಾದ ಎಸ್. ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

S-Narayan--1

ಬೆಂಗಳೂರು, ಜೂ.3– ಹೆಸರಾಂತ ನಿರ್ದೇಶಕ, ನಿರ್ಮಾಪಕ, ನಟ ಎಸ್.ನಾರಾಯಣ್ ಅವರಿಗೆ ನಾಳೆ 54ನೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಪ್ರಯುಕ್ತ ಅವರು ತಮ್ಮ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ.  ಪತ್ನಿ ಭಾಗ್ಯವತಿ ನಾರಾಯಣ್, ಪುತ್ರರಾದ ಪಂಕಜ್, ಪವನ್ ಅವರೂ ಕೂಡ ನಾಳೆ ನಾರಾಯಣ್ ಅವರೊಂದಿಗೆ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ತೆರಳಿ ನೇತ್ರದಾನ ಪತ್ರಕ್ಕೆ ಸಹಿ ಮಾಡಲಿದ್ದಾರೆ. ನನಗೆ ಚಿಕ್ಕಂದಿನಿಂದ ಡಾ.ರಾಜ್‍ಕುಮಾರ್ ಅವರು ಸ್ಫೂರ್ತಿ. ಅವರ ಸಿನಿಮಾ, ಗುಣ ಹಾಗೂ ನಡವಳಿಕೆಗಳನ್ನು ನೋಡಿಕೊಂಡು ನಾನು ಬೆಳೆದವನು. ರಾಜ್‍ಕುಮಾರ್ ಅವರು ನೇತ್ರದಾನ ಮಾಡಿದ ದಿನದಂದೇ ನಾನೂ ಕೂಡ ಆ ಸಂಕಲ್ಪ ಮಾಡಿದ್ದೆ ಎಂದು ಅವರು ಈ ಸಂಜೆಯೊಂದಿಗೆ ಮಾತನಾಡುತ್ತ ತಿಳಿಸಿದರು.


ಮೊನ್ನೆ ವಿಧಿವಶರಾದ ಪಾರ್ವತಮ್ಮ ರಾಜ್‍ಕುಮಾರ್ ಅವರು ನೇತ್ರದಾನ ಮಾಡಿದ್ದಾರೆ. ಮಣ್ಣಲ್ಲಿ ಮಣ್ಣಾಗಿ ಹೋಗುವವರ ಕಣ್ಣುಗಳು ಇಂದು ಬೇರೆಯವರ ಪಾಲಿನ ಬೆಳಕಾಗಿವೆ.   ನೇತ್ರದಾನ ನಿಜವಾದ ಮಹಾದಾನ ಎಂದು ಎಸ್.ನಾರಾಯಣ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin